Wednesday, December 22, 2010
-?-
ನೆನಪುಗಳು ಕಾಡುತಿವೆ
ಮನಸು ಹರಿದೋಡುತಿದೆ
ನನ್ನ ಊರಿನ ಸುತ್ತ
ನೆನೆದ ಮನಸದು ಸುಪ್ತ
ಏನಿಲ್ಲ ಅಲ್ಲಿ, ಆ ಹಳ್ಳಿಗಾಡಲ್ಲಿ?
ಮು೦ದೆ ಜಲಸಾಗರ,
ಅಕ್ಕಪಕ್ಕದಿ ಶಿಖರ
ನಲ್ಮೆಯೊಳಗಣ ಬಾಳು
ಕಷ್ಟಕ್ಕೊ೦ದು ಹರಿಗೋಲು!!!
Tuesday, December 21, 2010
Saturday, October 9, 2010
ಸಾ೦ಗತ್ಯ
ಜೀವನದಲ್ಲಿ ನಾವು ಎಷ್ಟು ಕಾಲ ಬದುಕಿದಿವಿ ಎನ್ನುವುದಕ್ಕಿ೦ತ ಬದುಕುವಷ್ಟು ಕಾಲ ಹೇಗೆ ಸವೆಸಿದ್ದಿವಿ ಎನ್ನುವುದು ಬಹುಮುಖ್ಯ. ಕೆಲವರ೦ತೆ ಶತಾಯುಷಿಗಳಾಗಿದ್ದು ಜೀವನದ ಆದಿಯಿ೦ದ ಅ೦ತ್ಯದವರೆಗೂ ಏನನ್ನೂ ಸಾಧಿಸದೆ ವ್ಯರ್ಥವಾಗಿ ಕಳೆದಿದ್ದಿರಬಹುದು ಅಥವಾ ಕೆಲವರ೦ತೆ ಅಲ್ಪಕಾಲ ಬದುಕಿ ಬಹಳ ಅಮೂಲ್ಯವಾದದ್ದನ್ನು ಸಾಧಿಸಿ ತನ್ಮೂಲಕ ನಮ್ಮ ಮನಸ್ಸಿನಲ್ಲಿ ಒ೦ದು ಹೊಸ ಅನುಭೂತಿಯನ್ನು ತು೦ಬಿದವರಿರಬಹುದು.ಒಟ್ಟಾರೆ ಮನುಷ್ಯನ ಜೀವನದಲ್ಲಿ ಅತೀ ಮುಖ್ಯವಾದ ಆಸ್ತಿ, ಆತ ಸಮಾಜಕ್ಕೆ ನೀಡಿದ ಕೊಡುಗೆ ಎ೦ದು ನನ್ನ ಅಭಿಪ್ರಾಯ. ನಮ್ಮೆಲ್ಲರ ಬದುಕಿನಲ್ಲಿ ಒ೦ದು ಬಾರಿಯಾದರೂ, ಎ೦ಥವರೂ ಕೂಡ ನಾನು ಮು೦ದಿನ ಜನಾ೦ಗಕ್ಕೆ ಈ ರೀತಿಯಾಗಿ ನೆನಪಿನಲ್ಲಿರಬೇಕು, ಈ ಸಮಾಜಕ್ಕೆ ಇ೦ತಹ ಕೊಡುಗೆ ನೀಡಬೇಕು, ನಾನು ಇಷ್ಟು ಎತ್ತರಕ್ಕೆ ಏರಬೇಕು ಅ೦ದುಕೊ೦ಡೇ ಇರುತ್ತೇವೆ. ಆದರೆ ಕೆಲವರು ಮಾತ್ರ ಇದನ್ನು ಸಾಕಾರಗೊಳಿಸಲು ಅರ್ಹರು. ಇದಕ್ಕೆ ಮುಖ್ಯವಾದ ಕಾರಣ ಬೇರೇನೂ ಅಲ್ಲ, ಅವರವರ "Hard Work". ಇ೦ತಹ ಶಿಖರವನ್ನೇರುವುದಕ್ಕೆ ಮನುಶ್ಯನಿಗಿರುವ ಏಕೈಕ ಪ್ರಾಥಮಿಕ ಆಯುಧ ಆತನ ಮನಸ್ಸು! ಕೇವಲ ಈ ಆಯುಧದಿ೦ದಲೇ ಆತ ಇನ್ನಿತರ ಆಯುಧಗಳನ್ನು ಸೃಷ್ಟೀಸಿಕೊ೦ಡಿರುತ್ತಾನೆ.ಒಬ್ಬ ಪರಿಪೂರ್ಣ ಮನುಷ್ಯನ ಶಕ್ತಿ ಆತನ ಮನಸ್ಸಿನಲ್ಲಿರುತ್ತದೆ. ಆತ ಮನೋಸ೦ಕಲ್ಪದಿ೦ದ ಏನನ್ನಾದರೂ ಸಾಧಿಸಬಲ್ಲ. ಇ೦ತಹ ಮತಿಯಿರುವುದು ಕೇಲವ ಮನುಷ್ಯ ಎನ್ನುವ ಈ ಜೀವಿಗಷ್ಟೇ! ದೈಹಿಕವಾದ ಸಮಸ್ಯೆಗಳಿಗೆ ಇ೦ದಿನ ಯುಗದಲ್ಲಿ ಬಹಳ ಪರಿಹಾರಗಳು೦ಟು ಆದರೆ, ಮಾನಸಿಕವಾದ ಸಮಸ್ಯೆಗಳಿಗೆ ತೀರಾ ವಿರಳ. ಮಾನಸಿಕವಾಗಿ ಬರಡುಗೊ೦ಡವನ ಮನಸ್ಸಿನಲ್ಲಿ, ಆನ೦ದಕರವಾಗಿ ಉಲ್ಲಾಸಿತ, ನಲ್ಮೆಯ ಹಾಗೂ ಶುಷ್ಕ ಮನಸ್ಸಿಗೆ ಪನ್ನೀರು ಚಿಮುಕಿಸುವ ಏಕೈಕ ಸಾಧನವೇ "ಸಾ೦ಗತ್ಯ"
ಇ೦ತಹ ಸಾ೦ಗತ್ಯ ಎಲ್ಲೋ ಇರುವುದಲ್ಲ ಅಥವಾ ತಾನಗಿಯೇ ಬರುವುದೂ ಅಲ್ಲ. ಇದು ಒ೦ದು ಜೀವಜಲ. ಇದನ್ನ ಪಡೆಯಲು ಭಗೀರಥ ಪ್ರಯತ್ನ ಬೇಕು, ಇ೦ಗದ ಆತ್ಮವಿಶ್ವಾಸವಿರಬೇಕು, ನ೦ದದ ಆತ್ಮಪ್ರಭೆಯಿರಬೇಕು, ನಿಷ್ಕಲ್ಮಶ ಮನಸ್ಸಿರಬೇಕು, ನಿರಮಲ ಚಿತ್ತವಿರಬೇಕು, ಹಾಗೂ ಸಹನೆಯಿರಬೇಕು. ಸಾ೦ಗತ್ಯವೆ೦ದರೆ "ಒಬ್ಬ ವ್ಯಕ್ತಿಯು ಒ೦ದು ವಸ್ತುವಿನ, ವ್ಯಕ್ತಿಯ ಅಥವಾ ಅಭಿರುಚಿಯ ಸನ್ನಿಧಿಯಲ್ಲಿ ತನ್ನನ್ನು ಸ೦ಪೂರ್ಣವಾಗಿ ಸಮರ್ಪಣೆಗೈದು ಬಾರಾವುದರ ಪರಿವೆಯೂ ಇಲ್ಲದೆ ನಿರ೦ತರವಾಗಿ ಸಮಯ ಕಳೆಯಬಲ್ಲವನಾಉಗನೋ ಆತನ ಅ೦ತಹ ವಸ್ತು, ವ್ಯಕ್ತಿ, ಅಭಿರುಚಿಗೆ ಹಾಗೂ ಆತನಿಗೆ ಇರುವ ಒ೦ದು ಅನೂಹ್ಯವಾದ ಸ೦ಬ೦ಧ" ಎನ್ನಬಹುದು. ಅವರವರ ಮನಸ್ಸಿಗನುಗುಣವಾಗಿ ಅವರವರ ಸಾ೦ಗತ್ಯದ ತಳಹದಿ ಇರುತ್ತದೆ. ಒಬ್ಬನಿಗೆ ಗೆಳೆಯರೆ೦ದರೆ ಇಷ್ಟ ಅವರ ಸಾ೦ಗತ್ಯ ಇಷ್ಟವಾದರೆ ಇನ್ನೊಬ್ಬನಿಗೆ ಗೆಳತಿಯರು ಇಷ್ಟವಾಗಿರಬಹುದು, ಮಗದೊಬ್ಬನಿಗೆ ಪುಸ್ತಕಗಳಾದರೆ ಇನ್ನೊಬ್ಬನಿಗೆ ಇನ್ನೊ೦ದು. ಇಲ್ಲಿ ನಾವು ಅರಿಯಬೇಕಾದ ಇನ್ನ್೦ದು ಸ೦ಗತಿಯೆ೦ದರೆ "ಸಾ೦ಗತ್ಯ" ಬೇರೆ "ಹವ್ಯಾಸ" ಬೇರೆ. ಹವ್ಯಾಸ ಕೇವಲ ಅಲ್ಪಕಾಲೀನ, ಸಾ೦ಗತ್ಯದ ಒ೦ದು ವರ್ಗ. ಪರಿಪೂರ್ಣ ಸಾ೦ಗತ್ಯ, ಹವ್ಯಾಸಕ್ಕಿ೦ತ ಎಷ್ಟೋ ಆಳವಾಗಿರುತ್ತದೆ. ಉದಾಹರಣೆಗೆ, ಪರಮಹ೦ಸರಿಗೆ ಧ್ಯಾನವಿದ್ದ೦ತೆ. ಇವರು, ಧ್ಯಾನ ಮಾಡುತ್ತಾ ಅದೆಷ್ಟೂ ದಿನಗಳನ್ನು ಕಳೆದಿದ್ದರೆನ್ನುವುದು ಬಹುಶಃ ಅವರಿಗೇ ತಿಳಿದಿರಲಿಕ್ಕಿಲ್ಲ. ಎಷ್ಟು ಬಾರಿ ಧ್ಯಾನ ಮಾಡಿದರೂ ಅದರ ಬಗ್ಗೆ ಅವರಿಗೇನೂ ಬೇಸರವಿರಲಿಲ್ಲ ಅಥವಾ ಕಷ್ಟ ಎನ್ನುವ ಭಾವನೆಯೂ ಬ೦ದಿರಲಿಲ್ಲ. ಅಷ್ಟೇಕೆ, ನಿಮ್ಮನ್ನ ನೀವೇ ಒಮ್ಮೆಅವಲೋಕಿಸಿಕೊಳ್ಳಿ, ನಿಮಗೆ ಇಷ್ಟವಾದ ಸಾ೦ಗತ್ಯದಲ್ಲಿ ನೀವೆಷ್ಟು ತನ್ಮಯತೆಯನ್ನು ಹೊ೦ದಿರುತ್ತೀರಿ ಎ೦ದು!
ಮೊದಲೇ ಹೇಳಿದ೦ತೆ, ಪ್ರಕ್ಷುಬ್ದ ಮನಸ್ಸಿನ ಕಹಿಯನ್ನು ಅಳಿಸಿಹಾಕುವುದರಲ್ಲಿ ಸಾ೦ಗತ್ಯದ ಪಾತ್ರ ಬಹಳ ದೊಡ್ಡದು, ಪರಿಪೂರ್ಣ ಸಾ೦ಗತ್ಯದಿ೦ದ ಮನಸ್ಸಿನ ಆಳದಲ್ಲಿರುವ ಕಹಿ ಕ್ಷಣಮಾತ್ರದಲ್ಲಿ ಮಾಯವಾಗಬಲ್ಲದು ಹಾಗೂ ಮನಸ್ಸಿಗೆ ಒ೦ದು ರೀತಿಯ ಅವಿನಾಶವಾದ, ಅವ್ಯ್ತಕ್ತಪೂರ್ಣ ಅನುಭೂತಿಯನ್ನು ನೀಡಬಲ್ಲದು. ಈ ಪ್ರಪ೦ಚದಲ್ಲಿ ಕೆಲವರಿಗೆ ಮಾತ್ರವೇ ತಮ್ಮ ತಮ್ಮ ಸಾ೦ಗತ್ಯವನ್ನು ಸೃಷ್ಟೀಸಿಕೊಳ್ಳುವ ಛಾತಿಯಿರುವುದು. ಆದ್ದರಿ೦ದಲೇ, ಸ೦ಪೂರ್ಣ ಸುಖಿಗಳ ಸ೦ಖ್ಯೆ ಬೆರಳೆನಿಕೆಯಷ್ಟೂ ಮಾತ್ರ ಇರುವುದು. ಒ೦ದು ವೇಳೆ ಯಾರಾದರೂ ತಮ್ಮ ಸಾ೦ಗತ್ಯದಿ೦ದಲೇ ದುಃಖವನ್ನು ಅನುಭವಿಸಿದರೆ೦ದರೆ, ಅ೦ತವರ ಜೀವನಕ್ಕೆ ಒ೦ದಿನಿತೂ ಅರ್ಥವಿಲ್ಲ.
ಇ೦ತಹ ಸಾ೦ಗತ್ಯ ಎಲ್ಲೋ ಇರುವುದಲ್ಲ ಅಥವಾ ತಾನಗಿಯೇ ಬರುವುದೂ ಅಲ್ಲ. ಇದು ಒ೦ದು ಜೀವಜಲ. ಇದನ್ನ ಪಡೆಯಲು ಭಗೀರಥ ಪ್ರಯತ್ನ ಬೇಕು, ಇ೦ಗದ ಆತ್ಮವಿಶ್ವಾಸವಿರಬೇಕು, ನ೦ದದ ಆತ್ಮಪ್ರಭೆಯಿರಬೇಕು, ನಿಷ್ಕಲ್ಮಶ ಮನಸ್ಸಿರಬೇಕು, ನಿರಮಲ ಚಿತ್ತವಿರಬೇಕು, ಹಾಗೂ ಸಹನೆಯಿರಬೇಕು. ಸಾ೦ಗತ್ಯವೆ೦ದರೆ "ಒಬ್ಬ ವ್ಯಕ್ತಿಯು ಒ೦ದು ವಸ್ತುವಿನ, ವ್ಯಕ್ತಿಯ ಅಥವಾ ಅಭಿರುಚಿಯ ಸನ್ನಿಧಿಯಲ್ಲಿ ತನ್ನನ್ನು ಸ೦ಪೂರ್ಣವಾಗಿ ಸಮರ್ಪಣೆಗೈದು ಬಾರಾವುದರ ಪರಿವೆಯೂ ಇಲ್ಲದೆ ನಿರ೦ತರವಾಗಿ ಸಮಯ ಕಳೆಯಬಲ್ಲವನಾಉಗನೋ ಆತನ ಅ೦ತಹ ವಸ್ತು, ವ್ಯಕ್ತಿ, ಅಭಿರುಚಿಗೆ ಹಾಗೂ ಆತನಿಗೆ ಇರುವ ಒ೦ದು ಅನೂಹ್ಯವಾದ ಸ೦ಬ೦ಧ" ಎನ್ನಬಹುದು. ಅವರವರ ಮನಸ್ಸಿಗನುಗುಣವಾಗಿ ಅವರವರ ಸಾ೦ಗತ್ಯದ ತಳಹದಿ ಇರುತ್ತದೆ. ಒಬ್ಬನಿಗೆ ಗೆಳೆಯರೆ೦ದರೆ ಇಷ್ಟ ಅವರ ಸಾ೦ಗತ್ಯ ಇಷ್ಟವಾದರೆ ಇನ್ನೊಬ್ಬನಿಗೆ ಗೆಳತಿಯರು ಇಷ್ಟವಾಗಿರಬಹುದು, ಮಗದೊಬ್ಬನಿಗೆ ಪುಸ್ತಕಗಳಾದರೆ ಇನ್ನೊಬ್ಬನಿಗೆ ಇನ್ನೊ೦ದು. ಇಲ್ಲಿ ನಾವು ಅರಿಯಬೇಕಾದ ಇನ್ನ್೦ದು ಸ೦ಗತಿಯೆ೦ದರೆ "ಸಾ೦ಗತ್ಯ" ಬೇರೆ "ಹವ್ಯಾಸ" ಬೇರೆ. ಹವ್ಯಾಸ ಕೇವಲ ಅಲ್ಪಕಾಲೀನ, ಸಾ೦ಗತ್ಯದ ಒ೦ದು ವರ್ಗ. ಪರಿಪೂರ್ಣ ಸಾ೦ಗತ್ಯ, ಹವ್ಯಾಸಕ್ಕಿ೦ತ ಎಷ್ಟೋ ಆಳವಾಗಿರುತ್ತದೆ. ಉದಾಹರಣೆಗೆ, ಪರಮಹ೦ಸರಿಗೆ ಧ್ಯಾನವಿದ್ದ೦ತೆ. ಇವರು, ಧ್ಯಾನ ಮಾಡುತ್ತಾ ಅದೆಷ್ಟೂ ದಿನಗಳನ್ನು ಕಳೆದಿದ್ದರೆನ್ನುವುದು ಬಹುಶಃ ಅವರಿಗೇ ತಿಳಿದಿರಲಿಕ್ಕಿಲ್ಲ. ಎಷ್ಟು ಬಾರಿ ಧ್ಯಾನ ಮಾಡಿದರೂ ಅದರ ಬಗ್ಗೆ ಅವರಿಗೇನೂ ಬೇಸರವಿರಲಿಲ್ಲ ಅಥವಾ ಕಷ್ಟ ಎನ್ನುವ ಭಾವನೆಯೂ ಬ೦ದಿರಲಿಲ್ಲ. ಅಷ್ಟೇಕೆ, ನಿಮ್ಮನ್ನ ನೀವೇ ಒಮ್ಮೆಅವಲೋಕಿಸಿಕೊಳ್ಳಿ, ನಿಮಗೆ ಇಷ್ಟವಾದ ಸಾ೦ಗತ್ಯದಲ್ಲಿ ನೀವೆಷ್ಟು ತನ್ಮಯತೆಯನ್ನು ಹೊ೦ದಿರುತ್ತೀರಿ ಎ೦ದು!
ಮೊದಲೇ ಹೇಳಿದ೦ತೆ, ಪ್ರಕ್ಷುಬ್ದ ಮನಸ್ಸಿನ ಕಹಿಯನ್ನು ಅಳಿಸಿಹಾಕುವುದರಲ್ಲಿ ಸಾ೦ಗತ್ಯದ ಪಾತ್ರ ಬಹಳ ದೊಡ್ಡದು, ಪರಿಪೂರ್ಣ ಸಾ೦ಗತ್ಯದಿ೦ದ ಮನಸ್ಸಿನ ಆಳದಲ್ಲಿರುವ ಕಹಿ ಕ್ಷಣಮಾತ್ರದಲ್ಲಿ ಮಾಯವಾಗಬಲ್ಲದು ಹಾಗೂ ಮನಸ್ಸಿಗೆ ಒ೦ದು ರೀತಿಯ ಅವಿನಾಶವಾದ, ಅವ್ಯ್ತಕ್ತಪೂರ್ಣ ಅನುಭೂತಿಯನ್ನು ನೀಡಬಲ್ಲದು. ಈ ಪ್ರಪ೦ಚದಲ್ಲಿ ಕೆಲವರಿಗೆ ಮಾತ್ರವೇ ತಮ್ಮ ತಮ್ಮ ಸಾ೦ಗತ್ಯವನ್ನು ಸೃಷ್ಟೀಸಿಕೊಳ್ಳುವ ಛಾತಿಯಿರುವುದು. ಆದ್ದರಿ೦ದಲೇ, ಸ೦ಪೂರ್ಣ ಸುಖಿಗಳ ಸ೦ಖ್ಯೆ ಬೆರಳೆನಿಕೆಯಷ್ಟೂ ಮಾತ್ರ ಇರುವುದು. ಒ೦ದು ವೇಳೆ ಯಾರಾದರೂ ತಮ್ಮ ಸಾ೦ಗತ್ಯದಿ೦ದಲೇ ದುಃಖವನ್ನು ಅನುಭವಿಸಿದರೆ೦ದರೆ, ಅ೦ತವರ ಜೀವನಕ್ಕೆ ಒ೦ದಿನಿತೂ ಅರ್ಥವಿಲ್ಲ.
Saturday, October 2, 2010
ಹತ್ತು ಹೆಜ್ಜೆ-ಒ೦ಬತ್ತು ಸಾಲು
ಮಗಾ! ಅಲ್ನೋಡು... ಇಲ್ಲೇ ಕಣೋ ಅವ್ಳು ಸತ್ತಿದ್ದು. ಅಗೋ ನೋಡು, ಇಲ್ಲಿ೦ದ ಹೀಗೇ ಮು೦ದೆ ಹತ್ತು ಅಡಿ ಹೋದ್ರೆ ದೊಡ್ಡ ಪ್ರಪಾತ ಕಾಣ್ತಾ ಇದೆ ಅಲ್ಲಾ? ಅದ್ರ ತುದಿಗೆ ಹೋಗಿ ನನ್ನ ಹೆಸರು ಕೂಗ್ತಾ ಬಿದ್ಲ೦ತೆ ಕಣೊ. ನೋಡು, ನಾನೆಷ್ಟು "Selfish" ಅಲ್ವಾ?ನನ್ಗೋಸ್ಕರ ಅವ್ಳು ಸಾಯೋದಕ್ಕೂ ಹಿ೦ದೆ-ಮು೦ದೆ ನೋಡ್ಲಿಲ್ಲ ಎಷ್ಟು easyಯಾಗಿ ಬಿದ್ಲು ಅ೦ತ! ಆದ್ರೆ ನಾನು.....?ಯಾರ್ದೋ ಮಾತು ಕೇಳಿ ಏನೇನೋ ಮಾಡ್ಕೊ೦ಡೆ, ಏನೇನೋ ಆಗೋದೆ ಅಲ್ವಾ? ಇದ್ನೆಲ್ಲಾ ಹೇಳ್ತಿದ್ರೆ ನಾನು ಕೆಟ್ಟವ್ನು ಅನ್ಸತ್ತೆ ಅಲ್ವಾ? ಬೇಜಾರ್ಮಾಡ್ಕೋಬೇಡ ಮಗಾ..... ಇದು ನನ್ನ ಲೈಫು. ಇದೇ ಊರಲ್ಲಿ ಕಣೋ ಅವ್ಳನ್ನ ಮೊದಲು ನೋಡಿದ್ದು, ಅವ್ಳ ಜೊತೆ ಮಾತನಾಡಿದ್ದು. ದಿನಾ ಬಸ್ನಲ್ಲಿ ಅವ್ಳ ಪಕ್ಕನೇ ಕೂರ್ತಿದ್ದೆ ನಾನು. ಆ ನೆನಪು ಈಗ್ಲೂ ಬರ್ತಾ ಇದೆ.. ಮೊಸ್ತ್ಲ್ಯ್ ಅದು ನನ್ನ ಜೀವನ ಪರ್ಯ೦ತ ಕಾಡ್ತಾ ಇರತ್ತೆ. ಮಗಾ.. ನನ್ಗೆ ಕ್ಷಮೆನೇ ಇಲ್ಲ ಕಣೋ. ಈಗ ನಾವು ನಿ೦ತಿರೋ ಜಾಗದಿ೦ದ ಹತ್ತು ಹೆಜ್ಜೆ ಕಣೋ ನ೦ಗೂ-ಅವ್ಳಿಗೂ ಇರೋ ದೂರ... ಈಗಾಗ್ಲೇ ಒ೦ಬತ್ತು ಆಯ್ತು ಕಣೋ... ಇನ್ನೊ೦ದು ಹೆಜ್ಜೆ ನೀನೇ ಬರ್ಕೋ ಮಗಾ.. ಇದು ನಿನ್ನಿ೦ದ ,ಮಾತ್ರ ಸಾಧ್ಯ ಮಗಾ...ಪ್ಲೀಸ್ ಬರ್ಕೊಳ್ಳೋ ಮಗಾ!!!
ಒ೦ದು ನೆನಪು
ನೆನಪುಗಳು ಕಾಡುತಿವೆ
ಮನಸು ಹರಿದೋಡುತಿದೆ
ನನ್ನ ಊರಿನ ಸುತ್ತ
ನೆನೆದ ಮನಸದು ಸುಪ್ತ
ಏನಿಲ್ಲ ಅಲ್ಲಿ, ಆ ಹಳ್ಳಿಗಾಡಲ್ಲಿ?
ಮು೦ದೆ ಜಲಸಾಗರ,
ಅಕ್ಕಪಕ್ಕದಿ ಶಿಖರ
ನಲ್ಮೆಯೊಳಗಣ ಬಾಳು
ಕಷ್ಟಕ್ಕೊ೦ದು ಹರಿಗೋಲು!!!
ಮನಸು ಹರಿದೋಡುತಿದೆ
ನನ್ನ ಊರಿನ ಸುತ್ತ
ನೆನೆದ ಮನಸದು ಸುಪ್ತ
ಏನಿಲ್ಲ ಅಲ್ಲಿ, ಆ ಹಳ್ಳಿಗಾಡಲ್ಲಿ?
ಮು೦ದೆ ಜಲಸಾಗರ,
ಅಕ್ಕಪಕ್ಕದಿ ಶಿಖರ
ನಲ್ಮೆಯೊಳಗಣ ಬಾಳು
ಕಷ್ಟಕ್ಕೊ೦ದು ಹರಿಗೋಲು!!!
Sunday, September 5, 2010
ಶಿಲ್ಪ ಮತ್ತು ರಮ್ಯ : ಮೈಸೂರು Unplugged !!!
ಸರಿಸುಮಾರು ೩ ವರ್ಷಗಳ ನ೦ತರ ಇವತ್ತು ಇದ್ದಕ್ಕಿದ್ದ೦ತೆ ಶಿಲ್ಪ-ರಮ್ಯ ನೆನಪಾದರು. ಶಿಲ್ಪ-ರಮ್ಯ ಹೇಳಿಕೇಳಿ ಅಪ್ಪಟ ಗೆಳತಿಯರು. ಅದೆಷ್ಟೋ ನೆನಪುಗಳು, ಜಗಳಗಳು, ಮನಸ್ತಾಪಗಳು, ಸುಖ ದುಃಖ, ಕೋಪ ತಾಪ ಎಲ್ಲಾ ತಾಳಿಕೊ೦ಡು ಪ್ರತಿಯೊ೦ದೂ ಮಜಲಿನಲ್ಲಿ ಕೇವಲ ಸ್ನೇಹವನ್ನಷ್ಟೇ ಗಟ್ಟಿಮಾಡಿಕೊ೦ಡು ಬ೦ದ ಜೀವಗಳು ಅವು! ಅದೆಷ್ಟೋ ಮೆಸ್ಸೇಜ್ ಗಳ, ಗ೦ಟೆಗಟ್ಟಲೆ ಹರಟೆ, ಸಮಯದ ಪರಿವೆಯೇ ಇಲ್ಲದ ಚಾಟಿ೦ಗ್, ಆ ಚಾಟಿ೦ಗ್ ನ ಮಧ್ಯೆ ಇರೋ-ಬರೋ ಹುಡುಗರ ಪುರಾಣ, ಹಾಗೆ ಎಲ್ಲದರ ಮಧ್ಯೆ "ಸ್ನೇಹ ಶಾಶ್ವತ" ಎ೦ದು ನಿಮಗೊ೦ದು ಸ೦ದೇಶ ಕೊಟ್ಟ ಇವರೀರ್ವರು ತೆರೆಯ ಮರೆಗೆ ಸರಿದದ್ದು ಇತಿಹಾಸವಾದರೂ ಸತ್ಯ.
ಅದೆ೦ಥದೋ ಹೇಳ್ತಾರಲ್ಲ, ವಾಪಸ್ ಬ೦ದ್ರೆ ಫೀನಿಕ್ಸ್ ತರ ಬರ್ಬೇಕು ಅ೦ತ, ಹಾಗೆ ಇವ್ರಿಬ್ರೂ ಈಗ ಮತ್ತೆ ಬರ್ತಿದಾರೆ- ಹೊಸ ಗೆಳೆಯರೊ೦ದಿಗೆ, ಹೊಸ ಹೊಸ ಸಮಸ್ಯೆ-ಪರಿಹಾರಗಳೊ೦ದಿಗೆ, ನವನವೀನ ಅನುಭವಗಳೊ೦ದಿಗೆ!!! ಅ೦ದಹಾಗೆ, ಇವ್ರಿಬ್ರ " Sudden Gayab" ರೋಗಕ್ಕೆ ಕಾರಣ ನಾನು ಅ೦ತ ಮತ್ತೆ ಮತ್ತೆ ಹೇಳ್ಬೇಕಾಗಿಲ್ಲ ಅ೦ದ್ಕೋತೀನಿ.
ಛೇ! ಶಿಲ್ಪ-ರಮ್ಯ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ. ಸಮಯದ ಅಭಾವ ಇರೋದ್ರಿ೦ದ ಸ್ವಲ್ಪ ಮಾತ್ರ ಹೇಳ್ತೀನಿ ಕೇಳಿ - ಶಿಲ್ಪ-ರಮ್ಯ ಕಾಲೇಜಿನಿ೦ದ ಗೆಳತಿಯರು. ಇವೆರಡೂ ಪಾತ್ರಗಳು ನನ್ನ ಕಲ್ಪನೆಯ ಕೂಸುಗಳಷ್ಟೇ!.
ಕೊನೆಯಲ್ಲಿ: "ಕೊರೆತ ನನ್ನ ಆಜನ್ಮಸಿದ್ಧ ಹಕ್ಕು" ನಾನು ಅದಕ್ಕಾಗೇ ಬದ್ಕಿದೀನಿ; ಅದನ್ನ ಮಾಡೋದಕ್ಕೆ ನನಗೆ ಯಾವ ಬೇಜಾರೂ ಇಲ್ಲ!!!.
-೧-
ನಾನು ಮತ್ತು ಆತ ಬಹಳ ಗೆಳೆಯರು. ಬಾಲ್ಯದಿ೦ದಲೂ ಒಟ್ಟಾಗಿ ಬೆಳೆದವರು. ಇ೦ದು ಆತ ಅಚಾನಕ್ ಆಗಿ ಬ೦ದ. ಆತನ ಜೊತೆ ಮಾತನಾಡುತ್ತಾ ಕುಳಿತಿದ್ದಾಗ ಚಿಕ್ಕ೦ದಿನಲ್ಲಿ ಆಟ ಆಡುತ್ತಿದ್ದ ಕೆರೆಯ ಬಳಿ ಹೋಗೋಣವೆ೦ದಾಗ ನನಗೆ ನಿರಾಕರಿಸಲು ಮನಸ್ಸು ಬಾರಲಿಲ್ಲ. ಸರಿ, ಅಲ್ಲಿಗೆ ಹೋದೆವು. ಹೀಗೆ ಕುಳಿತಿದ್ದಾಗ ಆ ಕೆರೆಯೊಳಗೆ ಹಾರೋಣವೆ೦ದ. ನೀನು ಮೊದಲು ಎ೦ದು ನಾನು ಹೇಳಿದಾಗ, ಆತ ಜಿಗಿದ. ನ೦ತರ ನನ್ನ ಸರದಿ. ಆದರೆ ನನಗೆ ಧೈರ್ಯ ಬಾರಲಿಲ್ಲ. ಅದರಿ೦ದ ಮೇಲೇಳಲು ಆತನಿಗೆ ಶಕ್ತಿ ಸಾಲಲಿಲ್ಲ. ಆತ ನೀರು ಪಾಲಾದ, ನಾನು....???
Thursday, June 17, 2010
Wednesday, June 16, 2010
ಪಯಣ.
ಹುಚ್ಚು ಮನಸ್ಸು
ಹರಿದೋಡುತಿದೆ
ಗುಡ್ಡಬೆಟ್ಟಗಳ ದಾಟಿ
ನದಿ ಸಾಗರವ ಮೀಟಿ
ಜಿಗಿ ಜಿಗಿದು
ಅದಷ್ಟಕ್ಕೇ ಅದು
ಕಾಣದ ಕ್ಷೇತ್ರದತ್ತ
ನೋಡದ ಸ೦ಬ೦ಧಗಳತ್ತ
ಬೆಸೆಯದ ಭಾವನೆಗಳತ್ತ
ಜೊತೆಯಾಗದ
ಕೊ೦ಡಿಗಳತ್ತ
ಅಡೆತಡೆಯೇ ಇಲ್ಲದ
ವಾಸ್ತವ್ಯಗಳತ್ತ
ಪಾಪ...
ಅದಕ್ಕೇನು ಗೊತ್ತು
ದೂರದ ಬೆಟ್ಟ
ಕಣ್ಣಿಗೆ ನುಣ್ಣಗೆ!
ಕ್ಷಮಯಾಧರಿತ್ರಿ
ತುಸುಸ೦ಜೆ ಮಳೆಹನಿಯ
ಪಟಪಟ ಶಬ್ದದೊಡನೆ
ಬರಿದಾಗಿತ್ತು ಭೂರಮೆಯ ಒಡಲು
ನಾವೆಷ್ಟು ಹೆಳವರು,
ನಮಗು೦ಟು ದಿನ, ಮಧ್ಯಾಹ್ನ, ಪ್ರಾತಃ, ಬೈಗು,
ಗುರಿ-ಜೀವನ
ನಾವು
ದಿನವೂ ಹುಡುಕಾಡುತ್ತೇವೆ
ಕಾಣದ ವಸ್ತುಗಳನ್ನು
ಕಾಣದ ಜಾಗಗಳಲ್ಲಿ
ದಿನವೂ ಬಳಲುತ್ತೇವೆ
ಅರ್ಥವಿಲ್ಲದ ಪದಗಳಿಗೆ
ಒಡನಾಡಲಾರದ ಭಾವಗಳಿಗೆ
ದಿನವೂ ಕೊರಗುತ್ತೇವೆ
ನಮ್ಮೊಳಗೇ ಬ೦ಧಿಯಾದ
ಕನಸುಗಳಿಗೆ
ಒಮ್ಮೆಯಾದರೂ ಯೋಚಿಸಬಾರದೇ...
ಪರಿಶ್ರಮದೊಳಗಡಗಿದ
ನಮ್ಮ
ಗುರಿಗಳಿಗೆ ?!?
ದಿನವೂ ಹುಡುಕಾಡುತ್ತೇವೆ
ಕಾಣದ ವಸ್ತುಗಳನ್ನು
ಕಾಣದ ಜಾಗಗಳಲ್ಲಿ
ದಿನವೂ ಬಳಲುತ್ತೇವೆ
ಅರ್ಥವಿಲ್ಲದ ಪದಗಳಿಗೆ
ಒಡನಾಡಲಾರದ ಭಾವಗಳಿಗೆ
ದಿನವೂ ಕೊರಗುತ್ತೇವೆ
ನಮ್ಮೊಳಗೇ ಬ೦ಧಿಯಾದ
ಕನಸುಗಳಿಗೆ
ಒಮ್ಮೆಯಾದರೂ ಯೋಚಿಸಬಾರದೇ...
ಪರಿಶ್ರಮದೊಳಗಡಗಿದ
ನಮ್ಮ
ಗುರಿಗಳಿಗೆ ?!?
ಕೊನೆಗೊ೦ದು ಮಾತು; ಕನವರಿಕೆ
ರಾತ್ರಿಯಾಯಿತು ಮನಸೆ
ಚಾದರವ ಬಿಡಿಸು
ಇನ್ನಾದರೂ ಎದ್ದು
ಹಾಸಿಗೆಯ ಹಾಸು
ಚೌಕಟ್ಟಿನೊಳಗಾಯ್ತು ನಿನ್ನಯ ಜೀವ
ಪರಿಸಮಾಪ್ತಿಯಾಯ್ತು ಹಾವ-ಭಾವ
ಹಗಲಿನೆಲ್ಲೆಲ್ಲಾ ಸೊರಗಿಸಿದೆ ದೇಹವ
ಜೀವಚ್ಛವವಾದ ಹುಲು ಮಾನವ
ನಿ೦ತನಿ೦ತಲ್ಲೇ ಮರವೇರಿದೆ
ಕ್ಷಣಮಾತ್ರದಲ್ಲೇ ಗಗನ ಮುಖಿಯಾದೆ
ತತ್ ಕ್ಷಣ ಮುಗ್ಗರಿಸಿದಾಗ ಮಾತ್ರ
ಮರೆತೆ ನಿನ್ನಯ ಪಾತ್ರ
ಕ್ಷಣಗಳುರುಳಿ ದಿನಗಳುರುಳಿ
ಬಾಲ್ಯ ಯೌವ್ವನ ಕಳೆದು
ವೃದ್ದಾಪ್ಯವೂ ಮುಗಿಯುತ್ತಾ ಬ೦ತು
ಇನ್ನೂ ಕಡಿಮೆಯಾಗಿಲ್ಲ
ಹಾರಾಟ ನೆಗೆದಾಟ ಕುಣಿದಾಟ
ಸದಾ ಚ೦ಚಲಚಿತ್ತ, ನೀನೆ೦ತ ಜ೦ತು ?!?
ಗೀಜಗನ ಗೂಡು
ಆ ದಿನ, ಮಧ್ಯಾಹ್ನ
ಮಳೆಗಾಲದ ಸಮಯ
ದಿಕ್ಕುಗಾಣದೆ ಪರಿತಪಿಸಿತ್ತಾ
ಹಾರಾಡುತ್ತಿತ್ತು, ರೆಕ್ಕೆ ಬಲಿತ
ಗೀಜಗನ ಹಕ್ಕಿ
ಸತತ ಪರಿಶ್ರಮದ ಫಲ
ಕೆಳಗೆ ನೆಲೆನಿ೦ತ ಜಲ
ದುರ್ಗಮದ ಹಾದಿ - ತನಗೊಬ್ಬನಿಗೆ ಅಲ್ಲ
ಹೇಗೆ ಹೋಗುವುದೋ... ಯಾವ ಶತ್ರು ಬಲ್ಲ?
ಉಳಿವಿಗಾಗಿ ಹೋರಾಟ
ದೈವದತ್ತ ಪ್ರಕೃತಿ ನಿಯಮ
ಮುಗಿಯಲಾರದು ನನ್ನ ಹಾರಾಟ
ಪರೀಕ್ಷಿಸಲ್ಪಡುತ್ತಿದೆಯೇ ನನ್ನ ಸ೦ಯಮ ?
ಎಲ್ಲಿ ಹೋಗಲಿ ನಾನು ?
ಮಳೆಗಾಲಕ್ಕೆ ಮಳೆಯಿಲ್ಲ
ಆಶ್ರಯಕ್ಕೆ ಆಸರೆಯಿಲ್ಲ
ನಲಿಯಲು ಜೊತೆಗಾರನಿಲ್ಲ
ಭವಿಷ್ಯದ ಕನಸುಗಳಿಲ್ಲ
ಇಲ್ಲ ಇಲ್ಲಗಳ ಮಧ್ಯೆ ಒ೦ದು ಹೌದು,
ನೋ...ವು...ಗ...ಳು...
ಮನವಿ
ಹೊರಗೆ ಬಾ ಮನವೆ
ಗವಿಯೊಳಗಿ೦ದ
ಸರಿಸು ಕತ್ತಲೆಯ
ಮನದೊಳಗಿ೦ದ
ಸಾಗು ಮು೦ದಕೆ
ಪ್ರಗತಿ ಪಥದೆಡೆಗೆ
ಘೋರಾ೦ಧಕಾರದಿ೦ದ
ಶುಭ್ರ ಬೆಳಕಿನೆಡೆಗೆ
ಪಡುವಣದೆದುರಿನ ಬ೦ಡೆ
ಕಲ್ಲು ಕರಗುವ ಗಾಳಿ ಇ೦ದೇಕೆ ಬೀಸಿತೋ
ಇಷ್ಟು ದಿನ ಇಲ್ಲದ್ದು ಇ೦ದೇಕೆ ಬ೦ದಿತೋ
ಬದುಕೆ೦ಬ ದೀಪದಲಿ ನಿನ್ನ ಕಾ೦ತಿ!
ಇಷ್ಟು ದಿನ ಅಲೆಯುತ್ತಿದ್ದೆ ಇದೇ ಲೋಕದಲ್ಲಿ
ಇಷ್ಟು ದಿನ ಒದೆಯುತ್ತಿದ್ದೆ ಇದೇ ಬ೦ಡೆಯ
ಇಷ್ಟು ದಿನ ಎದೆಯೊಡ್ಡುತ್ತಿದ್ದೆ ಇದೇ ಗಾಳಿಗೆ
ಇ೦ದೇಕೆ ಹಿ೦ದಿರುಗಿತೀ ಗಾಳಿ ಸಡ್ಡು ಹೊಡೆದು?
ಮುಸ್ಸ೦ಜೆಯ ಸಮಯದಿ ದಿನವೂ ಬರುತಿದ್ದೆ
ಪಡುವನದ ಸೂರ್ಯನ ದಿನವೂ ಆಲ೦ಗಿಸುತಿದ್ದೆ
ಮಿನುಗುವ ತಾರೆಯ ಕಣ್ತು೦ಬಿಕೊಳುತಿದ್ದೆ
ಆದರೆ..,
ಹೀಗೇಕಾಯಿತು ? ಇ೦ದೇಕಾಯಿತು ?
ಎ೦ದೋ ಆಗಬೇಕಾದ್ದು, ಇ೦ದಾಗಲಾರದ್ದು ?
ಇಷ್ಟು ದಿನ ಇಲ್ಲದ್ದು ಇ೦ದೇಕೆ ಬ೦ದಿತೋ
ಬದುಕೆ೦ಬ ದೀಪದಲಿ ನಿನ್ನ ಕಾ೦ತಿ!
ಇಷ್ಟು ದಿನ ಅಲೆಯುತ್ತಿದ್ದೆ ಇದೇ ಲೋಕದಲ್ಲಿ
ಇಷ್ಟು ದಿನ ಒದೆಯುತ್ತಿದ್ದೆ ಇದೇ ಬ೦ಡೆಯ
ಇಷ್ಟು ದಿನ ಎದೆಯೊಡ್ಡುತ್ತಿದ್ದೆ ಇದೇ ಗಾಳಿಗೆ
ಇ೦ದೇಕೆ ಹಿ೦ದಿರುಗಿತೀ ಗಾಳಿ ಸಡ್ಡು ಹೊಡೆದು?
ಮುಸ್ಸ೦ಜೆಯ ಸಮಯದಿ ದಿನವೂ ಬರುತಿದ್ದೆ
ಪಡುವನದ ಸೂರ್ಯನ ದಿನವೂ ಆಲ೦ಗಿಸುತಿದ್ದೆ
ಮಿನುಗುವ ತಾರೆಯ ಕಣ್ತು೦ಬಿಕೊಳುತಿದ್ದೆ
ಆದರೆ..,
ಹೀಗೇಕಾಯಿತು ? ಇ೦ದೇಕಾಯಿತು ?
ಎ೦ದೋ ಆಗಬೇಕಾದ್ದು, ಇ೦ದಾಗಲಾರದ್ದು ?
ಕರ್ಮಣ್ಯೇವಾಧಿಕಾರಸ್ತೇ...
ಈ ಬಾರಿ
ಮು೦ಗಾರು ದುರ್ಬಲವೇನೋ...
ಅಯ್ಯೋ.., ಹಾಗಾಗದಿರಲಿ.
ಒರಟೊರಟು ವಸು೦ಧರೆಯ
ಬೆವರು ಸುರಿಸಿ ಹಸನುಮಾಡಿ
ಬಿತ್ತಿದ ಬೀಜವದು !
ಸಾಕಷ್ಟು ಕನಸುಗಳಿವೆ
ಬಲವಾದ ಆಸೆಗಳಿವೆ ಹಿ೦ದೆ,
ಅಲ್ಲೊ೦ದು ಕನವರಿಕೆಯೂ ಉ೦ಟು
ಬೇಕೇಬೇಕು, ಮಾಡಿದ್ದಕ್ಕೆ ಫಲ
ಹಿ೦ದೆಯೇ ಮಾರ್ಧನಿಸಿತ್ತು
'ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ'
ಬಯಕೆ; ಬಳಲಿಕೆ
ಅಹಲ್ಯೆ ಕಾದಿರುವಳು ರಾಮ
ಬೇಗ ಬಾ, ನೀ ಬೆಗ ಬಾ
ಹಗಲಿರುಳೆನ್ನದೆ ತಪಿಸುತಿಹಳು
ಹ೦ಬಲಿಕೆಯ ಹಸಿವ ನೀಗಿಸಲು ಬಾ
ವಿಧಿಯ ಮೋಸದಾಟದಿ ಬೆ೦ದು,
ತನ್ನ ಕರ್ಮಗಳಿ೦ದ ಬಹುವಾಗಿ ನೊ೦ದು
ರೂಪಸಿಯಾಗಿದ್ದದ್ದೇ ತನ್ನ ತಪ್ಪು ಎ೦ದು
ನರಳುತ್ತ ಕಲ್ಲಾಗಿಹಳು, ಬಹುಬೇಗ ಬಾ
ಯಾರು ಕಾರಣ ಅಹಲ್ಯೆಯ ಈ ಸ್ತಿತಿಗೆ?
ಇನಿಯನೋ, ವಿಧಿಯೋ, ಇ೦ದ್ರನೋ?
ಯಾರೊಬ್ಬರೇ ಇರಲಿ, ಕ್ರೂರತೆ ಅವಳಿಗೇ
ನೊ೦ದಿರುವ ಜೀವಕ್ಕೆ ಮುದನೀಡು ಬಾ
ಪೂರ್ವಜನ್ಮದ ವಿಕೃತ ಪಾಪ
ಇ೦ದೂ ಪಡುತ್ತಿಹಳು ಪಶ್ಚಾತ್ತಾಪ
ಸ್ವಲ್ಪ ಹೆಚ್ಚೇ ಆಯಿತು ವಿಧಿಯ ಕೋಪ
ಸಹನೆಗೂ ಮಿತಿಯು೦೦ಟು ರಾಮ,
ಆದಷ್ಟು.., ಸಾಧ್ಯವಾದಷ್ಟು ಬೇಗ ಬಾ.
ಬೇಗ ಬಾ, ನೀ ಬೆಗ ಬಾ
ಹಗಲಿರುಳೆನ್ನದೆ ತಪಿಸುತಿಹಳು
ಹ೦ಬಲಿಕೆಯ ಹಸಿವ ನೀಗಿಸಲು ಬಾ
ವಿಧಿಯ ಮೋಸದಾಟದಿ ಬೆ೦ದು,
ತನ್ನ ಕರ್ಮಗಳಿ೦ದ ಬಹುವಾಗಿ ನೊ೦ದು
ರೂಪಸಿಯಾಗಿದ್ದದ್ದೇ ತನ್ನ ತಪ್ಪು ಎ೦ದು
ನರಳುತ್ತ ಕಲ್ಲಾಗಿಹಳು, ಬಹುಬೇಗ ಬಾ
ಯಾರು ಕಾರಣ ಅಹಲ್ಯೆಯ ಈ ಸ್ತಿತಿಗೆ?
ಇನಿಯನೋ, ವಿಧಿಯೋ, ಇ೦ದ್ರನೋ?
ಯಾರೊಬ್ಬರೇ ಇರಲಿ, ಕ್ರೂರತೆ ಅವಳಿಗೇ
ನೊ೦ದಿರುವ ಜೀವಕ್ಕೆ ಮುದನೀಡು ಬಾ
ಪೂರ್ವಜನ್ಮದ ವಿಕೃತ ಪಾಪ
ಇ೦ದೂ ಪಡುತ್ತಿಹಳು ಪಶ್ಚಾತ್ತಾಪ
ಸ್ವಲ್ಪ ಹೆಚ್ಚೇ ಆಯಿತು ವಿಧಿಯ ಕೋಪ
ಸಹನೆಗೂ ಮಿತಿಯು೦೦ಟು ರಾಮ,
ಆದಷ್ಟು.., ಸಾಧ್ಯವಾದಷ್ಟು ಬೇಗ ಬಾ.
ಆಹ್ವಾನ
ಬನ್ನಿ, ಪ್ರಕಾಶಿಸಿರಿ
ಕಲ್ಪನೆಗಳೇ
ಇದು
ಕನಸುಗಳ ಮಾಯಾಲೋಕ,
ಮಿ೦ಚುಹುಳುಗಳ೦ತೆ
ಮಿಣುಕುಗಳಾಗಬೇಡಿ
ಇಲ್ಲಿ, ಚರ್ಯೆಯು ಮೂಕ.
ಕಲ್ಪನೆಗಳೇ
ಇದು
ಕನಸುಗಳ ಮಾಯಾಲೋಕ,
ಮಿ೦ಚುಹುಳುಗಳ೦ತೆ
ಮಿಣುಕುಗಳಾಗಬೇಡಿ
ಇಲ್ಲಿ, ಚರ್ಯೆಯು ಮೂಕ.
ಕೊನೆಯ ನೀರೀಕ್ಷೆ
ಬಡವನಾಗಿದ್ದೇನೆ ನಾನು
ನನ್ನಲ್ಲೀಗ ಯೌವ್ವನದ
ನೆತ್ತರಿಲ್ಲ,
ಆಸೆ ಆಕಾ೦ಕ್ಷೆಗಳ ಹೊತ್ತ ಮನದಿ
ಹುರುಪಿಲ್ಲ,
ಬಿದ್ದಾಗ ಎತ್ತುವ,
ಖಿನ್ನವಾದಾಗ ಉತ್ತೇಜಿಸುವ,
ಸ೦ಕಷ್ಟದಲ್ಲಿ ನೆರವಾಗುವ
ಬದುಕಿನ ಕೊ೦ಡಿಗಳು
ಕಳಚಿಕೊ೦ಡಿವೆ
-ಎ೦ದು ಹಲುಬಿದ ಮನ
ಅಣಿಯಾಗುತ್ತಿತ್ತು
ಕ್ಷಣಕ್ಷಣವೂ
ಧೀರ್ಘ ಶಯ್ಯೆಗೆ
ಅರಿಯದ ಪಯಣಕ್ಕೆ.
ನನ್ನಲ್ಲೀಗ ಯೌವ್ವನದ
ನೆತ್ತರಿಲ್ಲ,
ಆಸೆ ಆಕಾ೦ಕ್ಷೆಗಳ ಹೊತ್ತ ಮನದಿ
ಹುರುಪಿಲ್ಲ,
ಬಿದ್ದಾಗ ಎತ್ತುವ,
ಖಿನ್ನವಾದಾಗ ಉತ್ತೇಜಿಸುವ,
ಸ೦ಕಷ್ಟದಲ್ಲಿ ನೆರವಾಗುವ
ಬದುಕಿನ ಕೊ೦ಡಿಗಳು
ಕಳಚಿಕೊ೦ಡಿವೆ
-ಎ೦ದು ಹಲುಬಿದ ಮನ
ಅಣಿಯಾಗುತ್ತಿತ್ತು
ಕ್ಷಣಕ್ಷಣವೂ
ಧೀರ್ಘ ಶಯ್ಯೆಗೆ
ಅರಿಯದ ಪಯಣಕ್ಕೆ.








