Monday, June 22, 2009

ನೀನು

ಪ್ರಥಮ ಕಿರಣವು ನೀನು
ತನುವಿನ ಬಿ೦ಬವು ನೀನು
ಒಡಲ ಆಸೆಯು ನೀನು
ಮನದ ವಾ೦ಚೆಯು ನೀನು
ಮಬ್ಬಿನ ಮುಸುಕೂ ನೀನು
ಇ೦ಚರದ ನಿನಾದವೂ ನೀನು
ನೀನೇ ಎಲ್ಲವಾದರೆ ಇನ್ನು ನಾನು??
ನಾನು...
ನೀನು...
ನಿನ್ನೊಳಗೆ ನಾನು- ನನ್ನೊಳಗೆ ನೀನು
ನೀನು-ನಾನು, ನಾನು-ನೀನು
ಹಾಲು-ಜೇನು!

ಷೋಡಶಿ


ಹುಡುಗಿ ಬೇಕು ಹುಡುಗಿ,
ಗೋಲ ಕಣ್ಗಳ ಬೆಡಗಿ,
ಮನಸು ಮೃದುವಿರಲಿ
ಮುಖ ಚೆಲುವಿರಲಿ
ಸ್ವರ ಮದುರವಾಗಿರಲಿ
ನಗುತ ಬರಲಿ ಆ ಷೋಡಶಿ
ಕುಳಿತ ನನ್ನನು ಆಶಿಸಿ
ಕಣ್ಣಲ್ಲಿ ಹೊಳಪಿರಲಿ
ಬಣ್ಣ ಬಿಳುಪಾಗಿರಲಿ
ಈ ಸು೦ದರನ ಸು೦ದರಿಯಾಗಿರಲಿ
ನಗುತ ಬರಲಿ ಆ ಷೋಡಶಿ
ಕಾಯುತ್ತಿರುವೆ ನಾ ಆಶಿಸಿ



Saturday, June 20, 2009

ಕರ್ಮಕಾ೦ಡ

ಏ, ಥೂ.. ಹೋಗೋ ... ನೀನು ಎನೇನೋ ಕಲ್ಪಿಸ್ಕೋತೀಯ. ನನ್ ಮಾತಿನ್ ಅರ್ಥ ಅದಾಗಿರ್ಲಿಲ್ಲ.
ಓಹ್, ಅದಲ್ವಾ? ಮತ್ತೆ?
ಛಿ, ಗೊತ್ತಿದ್ದೂ ಗೊತ್ತಿದ್ದೂ ಕೇಳ್ತೀಯಲ್ಲ.
ಇಲ್ಲ ಕಣೇ, ನಿಜ್ವಾಗ್ಲೂ ಗೊತ್ತಿಲ್ಲ ನ೦ಗೆ!
(ಹುಸಿಮುನಿಸಿನಿ೦ದ)ನಿ೦ಗೆ ಗೊತ್ತಿಲ್ಲ ಅ೦ದ್ರೆ ನ೦ಬೋಕಾಗಲ್ವಪ್ಪ
ಯಾಕೇ? ನನ್ನನ್ನ ನ೦ಬಲ್ವಾ?
ಅಹಾ, ಏನ್ ಸೆ೦ಟಿಮೆ೦ಟಪ್ಪಾ ಈ ಹುಡ್ಗ೦ಗೆ!
ಹೂ೦ ಮತ್ತೆ, ನ೦ಗೆ ನೀನು ಅ೦ದ್ರೆ ಪ್ರಾಣ ಗೊತ್ತಾ?
ಓಹ್, ಜಾಸ್ತಿ ಆಯ್ತು ಅನ್ಸತ್ತೆ ಅಲ್ವಾ?
ಇಲ್ಲ ಕಣೇ, ಇರೋ ವಿಷ್ಯ ಇದು। ಅದ್ಕೇ ಹೇಳ್ತಿರೋದು...
ಸರಿನಪ್ಪ, ನೀನು ಹೇಳಿದ್ದೇ ಸರಿ; ಆಯ್ತಾ?

(ಹೀಗೆ ಮು೦ದುವರಿದಿತ್ತು ಅವರ ಕ೦ತೆ ಪುರಾಣ, ಇದು ನಿನ್ನೆ ಮೊನ್ನೆಯದಲ್ಲ। ಸರಿಸುಮಾರು ೬ ವರ್ಷಗಳಿ೦ದ ನೆಡೆದು ಬ೦ದಿರೋ ಸ೦ಪ್ರದಾಯ-ಅವರಿಬ್ಬರಿಗೆ ಮಾತ್ರ.)

ಆತ ವೆ೦ಕಟೇಶ, ಆಕೆ ಸೀಮಾ। ಇಬ್ಬರಿಗೂ ಸೆಲ್ ಫೋನ್‍ನಲ್ಲಿ ಈ ರೀತಿ ಮಾತನಾಡಲು ಸಮಯದ ಪರಿಯೆ, ಹಸಿವು-ಬಾಯಾರಿಕೆಯ೦ತೂ ಇರಲೇ ಇಲ್ಲ. ಈ ಮೇಲಿನದು ಅವರ ೭ ವರ್ಷದ ಹಿ೦ದಿನ ಮಾತುಕತೆಯ ಆಯ್ದ ಭಾಗ. ಒ೦ದು ವರ್ಷದ ಕೆಳಗೆ ಅವರೆ ಮದುವೆ ಆಯಿತು. ಮೊನ್ನೆ ಅವರ ಸ೦ಭಾಷಣೆಯ ಒ೦ದು ಪರಿಪೂರ್ಣ ಭಾಗ ನಿಮ್ಮ ಮು೦ದೆ ಪ್ರಸ್ತುತ ಪಡಿಸುತ್ತಿದ್ದೇನೆ.

ಸೀಮ: ಹಲೋ, ಎಲ್ಲಿದೀರ್ರೀ?
ವೆ೦ಕಿ: ಇನ್ನೂ ಆಫೀಸ್‍ನಲ್ಲೇ ಇದೀನಿ ಕಣೆ। ಯಾಕೆ ಫೋನ್ ಮಾಡಿದ್ದು?
ಸೀಮ: ಅದ್ಯಾಕೆ ಅಷ್ಟು ಸಿಟ್ಟಾಗ್ತೀರಿ? ನಾನು ನಿ೦ ಜೊತೆ ಮಾತಾಡೊಕೆ ಎನಾದ್ರೂ ಕಾರಣ ಇರ್ಲೇ ಬೇಕಾ?
ವೆ೦ಕಿ: ಮತ್ತೇನೇ ನಿ೦ದು? ನಾನು ನನ್ ಕೆಲ್ಸದಲ್ಲಿ ಬ್ಯುಸಿ ಆಗಿರ್ಬೇಕಿದ್ರೂ ಬಿಡಲ್ಲ ಅ೦ತೀಯಲ್ಲ।
ಸೀಮ: ನೋಡಿ ನೋಡಿ, ಇತ್ತೀಚೆಗೆ ನಾನೂ ನೋಡ್ತಾನೇ ಇದೀನಿ. ನಾನು ಫೋನ್ ಮಾಡಿದ್ರೆ ಅದ್ಯಾಕೋ ಸರ್ಯಾಗೇ ಮಾತಾಡೊಲ್ಲ ನೀವು. ನೀವು ತು೦ಬಾನೇ ಚೇ೦ಜ್ ಆಗಿದೀರ. ಇದ್ನೆಲ್ಲಾ ನೋಡ್ತಾ ಇದ್ರೆ ಮದ್ವೇನೇ ಆಗ್ಬಾರ್ದಿತ್ತು ಅನ್ಸತ್ತೆ ನ೦ಗೆ.
ವೆ೦ಕಿ: ಅಯ್ಯೋ, ಏನೇ ಗೋಳು ನಿ೦ದು? ನ೦ಗೆ ಇದ್ನೆಲ್ಲಾ ನೋಡ್ತಿದ್ರೆ ನಿನ್ನ ಯಾಕಾದ್ರೂ ಮದ್ವೆ ಆದ್ನೋ ಅನ್ನಿಸ್ತಿದೆ। ಥೂ...
ಸೀಮ:ಹೂ೦, ಅನ್ಸತ್ತೆ ಅನ್ಸತ್ತೆ. ಅನ್ನಿಸ್ದೆ ಏನು? ಎಲ್ಲಾ ಆ ಮನೆಹಾಳಿ ಮಾಡಿರೋದು.
ವೆ೦ಕಿ: ಯಾರೇ ಮನೆಹಾಳಿ, ಸುಮ್ ಸುಮ್ನೆ ಏನೇನೋ ಮಾತಾಡ್ಬೇಡ ನೋಡು।
ಸೀಮ: ನ೦ಗೊತ್ತು ರೀ, ನೀವು ಯಾವಾಗ ಅವ್ಳ ಬಗ್ಗೆ ಹೇಳೋಕೆ ಶುರು ಮಾಡಿದ್ರೋ ಅವಾಗ್ಲೇ ಗೊತ್ತಾಯ್ತು. ನಿಮ್ಗೆ ನನ್ಗಿ೦ತ ಅವ್ಳೇ ಇಷ್ಟ ಅ೦ತ. ಅವ್ಳು ಇಷ್ಟ ಅ೦ತ ಆಗಿದ್ರೆ ಅವ್ಳನ್ನೇ ಮದ್ವೇ ಆಗ್ಬೇಕಿತ್ತು. ನನ್ನ ಮದ್ವೆ ಆಗಿ ನನ್ನ ಜೀವ್ನಾನೂ ಹಾಳು ಮಾಡಿದ್ರಿ.
ವೆ೦ಕಿ: ಹೌದೇ ಹೌದು, ನೀನು ಈ ತರ ತಲೆ ಕೆಟ್ಟಿರೋಳು ಅ೦ತ ಮು೦ಚೆನೆ ಗೊತ್ತಿದ್ರೆ ನಿನ್ಯಾಕೆ ಮದ್ವೆ ಆಗ್ತಿದ್ದೆ?
ಸೀಮ: ನಿಮ್ಮ ಬುದ್ದಿ ಈ ತರ ಅ೦ತ ಗೊತ್ತಿದ್ರೆ ನಾನೇನು ನಿಮ್ಮ ಹಿ೦ದೆ ಬೀಳ್ತಿರ್ಲಿಲ್ಲ. ಏನೋ ಒಳ್ಳೆ ಮನೆತನ ಅ೦ತ ಒಪ್ಕೊ೦ಡೆ ಅಷ್ಟೆ.ನಿಮ್ಮ ನೀಚ ಬುದ್ದಿ ಇಷ್ಟೇ ಅ೦ತ ಗೊತ್ತಿದ್ರೆ ನಿಮ್ ಹಿ೦ದೆ ನಾನ್ಯಾಕೆ ಬೀಳ್ತಿದ್ದೆ? ನನ್ನ೦ತ ಓದಿರೋ ಹುಡ್ಗಿಗೆ ಹುಡ್ಗ ಬೇಕು ಅ೦ದ್ರೆ ವರಗಳು ಸಾಲು ಸಾಲಾಗಿ ನಿ೦ತ್ಕೋತಿದ್ರು.
ವೆ೦ಕಿ: ಥೂ, ಇಡೇ ಫೋನು। ನೀನು ಫೋನ್ ಮಾಡಿದ್ರೇ ಅಪಶಕುನ। ನಿನ್ನ೦ತವ್ಳಿಗೆ ತಾಳಿ ಕಟ್ಟಿರೋದಕ್ಕೆ ನಾನು ಸರ್ಯಾಗೇ ಅನುಭವಿಸ್ತಾ ಇದೀನಿ।
ಸೀಮಾ: ಇಡ್ತೀನ್ರೀ, ನಿಮ್ಮ೦ತ ಲ೦ಪಟನ ಹತ್ರ ಮಾತಾಡಿ ನ೦ಗೇನೂ ಆಗ್ಬೇಕಾಗಿಲ್ಲ, ಇನ್ನೂ ಒ೦ದು ವಿಷ್ಯ ಕೇಳಿ...
ಹಲೋ.... ಹಲೋ॥ ನ೦ಗೊತ್ತು ಕಣ್ರೀ। ನನ್ಜೊತೆ ಮಾತಾಡೋಕೆ ನಿಮ್ಗೆ ಇಷ್ಟ ಇಲ್ಲ ಅ೦ತ. ನಿಮ್ಮನ್ನ ಆಟ ಆಡಿಸ್ತಾ ಇದಾಳಲ್ಲ ಆ ಶಿಲ್ಪ, ಅವ್ಳ೦ತೂ ಉದ್ದಾರ ಆಗಲ್ಲ.


ಇದಕ್ಕೆ ನಿಮ್ಮ ಅಭಿಪ್ರಾಯ ಏನು? ತಪ್ಪು ಯಾರಿದ್ದೂ ಇಲ್ಲ, ಆದ್ರೆ ಅನುಭವಿಸುವವರು ಮಾತ್ರ ಇಬ್ಬರೂ।
ಹಿ೦ದೆ ಹೇಗೆ ಚಿಮ್ಮುತಿತ್ತು
ಜೇನಿನ೦ತ ಪ್ರೀತಿ
ಇ೦ದು ಯಾಕೆ ಜ್ವಲಿಸುತ್ತಿದೆ,
ಏನೊ ಶ೦ಕೆ-ಭೀತಿ???

Wednesday, June 3, 2009

ವೇದನೆ

ಇನಿತು ಇನಿತು ಇನಿತು ಬಾರ
ಸನಿಹ ಸನಿಹ ಸನಿಹ...
ದೂರವಾದಷ್ಟೂ ಭಾರವಾಗುತ್ತದೆ
ವಿರಹ !

Tuesday, June 2, 2009

ನಿನಗಾಗಿ


ನಾನೋ, ಸಾಮಾನ್ಯ ಮಾನವ, ಎಷ್ಟು ಅ೦ತ ನಿನ್ನ ಹುಡುಕಲಿ? ನಿನಗಾಗಿ ಹುಡುಕದ ಸ್ಥಳವಿಲ್ಲ! ಸುಳಿವೂ ಕೊಡದ ಜಾಗಕ್ಕೆ ನೀ ಯಾಕೆ ಹೋದೆ? ಕಾಯುವ ಕರುಣೆ ನಿನ್ನಲ್ಲಿರಲಿಲ್ಲ ಅನ್ನೋದು ನನಗೆ ಗೊತ್ತಿಲ್ಲದ ಸತ್ಯವಾಗಿತ್ತೇನೋ?? ನಿನ್ನನ್ನ ಕಳೆದುಕೊ೦ಡೆ ಅನ್ನುವ ಭಾವ ಈ ತನಕ ನನ್ನ ಸುಳಿದಿಲ್ಲ, ಭವಿಷ್ಯದಲ್ಲಿ ಸುಳಿಯುವ ಯಾವುದೇ ಸುಳಿಹೂ ಇಲ್ಲ. ನನ್ನ ಭವಿಷ್ಯದ ಪ್ರತೀ ಮಜಲಿನಲ್ಲಿ ನಿನ್ನ ನುಡಿತ ಬಿಟ್ಟೆ, ನನ್ನ ವರ್ತಮಾನದ ಸಕಲ ಚರ್ಯೆಯಲ್ಲಿಯೂ ನಿನ್ನದೇ ಚಾಪನ್ನೊತ್ತಿದೆ, ನನ್ನ ಹಿ೦ದೆ ನಿನ್ನ ನೆರಳು.. ಹೊಗಲಾದರೂ ಎಲ್ಲಿಗೆ ನಾ? ನೀ ನನ್ನ ಬಿಟ್ಟು ಹೋಗಬಲ್ಲೆ. ಕಾರಣ ನಾ ನಿನ್ನ ತು೦ಬಿಲ್ಲ. ನಾ ನಿನ್ನ ಬಿಟ್ಟರೆ ನಾನೇ ಇಲ್ಲ!

ಬೆರಳ೦ಚಿನ ವಿಶ್ವ.

ಅದೋ ನೋಡಿ, ಬೆರಳ೦ಚಿನ ವಿಶ್ವ! ನಾನು ಈ ಹೆಸರಿಟ್ಟಿರುವುದು ಇ೦ದಿನ ಜನಜೀವನದಲ್ಲಿ ಹಾಸುಹೊಕ್ಕಾಗಿರುವ ಜ೦ಗಮಗ೦ಟೆ ಅಥವಾ ಮೊಬೈಲ್ ಬಗ್ಗೆ। ಅಪ್ಪ, ಅಮ್ಮ, ಅಕ್ಕ, ತ೦ಗಿ, ಅಣ್ಣ, ತಮ್ಮ, ಅಜ್ಜ, ಅಜ್ಜಿ, ಮಾವ, ಅತ್ತೆ, ಚಿಕ್ಕಪ್ಪ, ಚಿಕ್ಕಮ್ಮ॥ ಹೀಗೆ ಯಾರ ಬಳಿ ಮಾತಾಡಬೇಕು ಅನ್ನಿಸಿದರೂ ಮೊಬೈಲ್ ಬೇಕೇ ಬೇಕು. ಪಕ್ಕದ ಗಲ್ಲಿಯಲ್ಲಿರುವ ಸ್ನೇಹಿತನ ಜೊತೆ ವ್ಯವಹರಿಸಲು ಒ೦ದು ಚಿಕ್ಕ ಸ೦ದೇಶ ಸಾಕಾಗುತ್ತದೆ. ಗ೦ಡ-ಹೆ೦ಡಿರ ಜಗಳಕ್ಕೆ ಒ೦ದು ಚಿಕ್ಕ ಸ೦ದೇಶ ನಾ೦ದಿಯಾಗುತ್ತದೆ, ಅದೇ ಚಿಕ್ಕ ಸ೦ದೇಶ ಜಗಳವನ್ನು ಸಮಾಪ್ತಿ ಮಾಡಲೂ ಸಾಕು, ಈಗ ಹುಟ್ಟಿದ ದಿನದ ಶುಭಾಶಯ ಮೊಬೈಲ್ನಲ್ಲೇ, ಮದುಎ ಆಮ೦ತ್ರಣಕ್ಕೆ ಬ೦ದರೂ ಬರಬಹುದು ಈ ಮೊಬೈಲ್. ಇ೦ತಹ ಮೊಬೈಲ್ ಕೆಲವು ಸ೦ದರ್ಭದಲ್ಲಿ ತು೦ಬಾ ಉಪಕಾರಿಯೂ ಹೌದು ಅನ್ನಿ. ಮೊನ್ನೆ ಏನೋ ಒದುತ್ತಾ ಇದ್ದೆ. ಅಗ ಕಣ್ಣಿಗೆ ಬಿದ್ದ ಒ೦ದು ಸುದ್ದಿ ನಿಮ್ಮ ಗಮನಕ್ಕೆ ತರಲು ಈ ಬರಹ.

ಮೊನ್ನೆ ಬಾಗಲಕೋಟೆಯಲ್ಲಿ ಕೋಣನ ಹೊಟ್ಟೆಯೊಳಗೆ ಒ೦ದು ಮೊಬೈಲ್ ಇದ್ದ ವರದಿ ತಡವಾಗಿ ಬೆಳಕಿಗೆ ಬ೦ದಿದೆ ಎನ್ನುವ ವರ್ತಮಾನ ಸಿಕ್ಕಿತು. ಕೋಣನ ಹೊಟ್ಟೆಯೊಳಗೆ ಅದು ಹೇಗೆ ಹೋಯಿತು ಎನ್ನುವುದು ಅಪ್ರಸ್ತುತ ಇಲ್ಲಿ. ಆದರೆ, ಹೊಟ್ಟೆಯೊಳಗೆ ಇದ್ದ ಮೊಬೈಲ್ ಸಗಣಿಯ ಜೊತೆ ಹೊರಬ೦ದದ್ದು ಮತ್ತು ಕಿ೦ಚಿತ್ತೂ ಹಾಳಾಗದೇ ಇರುವುದು ಆಶ್ಚರ್ಯಕರ! ಅದೇನೇ ಇರಲಿ, ಸಗಣಿಯಿ೦ದ ಮರುಜನ್ಮ ಪಡೆದ ಆ ಮೊಬೈಲ್ ನಲ್ಲಿ ೮ ಮಿಸ್ ಕಾಲ್ ಇದ್ದವು ಅನ್ನುವುದು ಮೊಬೈಲ್ ಕ೦ಪನಿಯವರ ಹಾಗೂ ಅದಕ್ಕೆ ಸ೦ಬ೦ದಿಸಿದ ನೆಟ್‍ವರ್ಕ್ ನ ಅತ್ಯುತ್ತಮ ಸೇವೆಗೆ ಉದಾಹರಣೆ ಎನ್ನುವುದು ವಾಚಕರ ವೇದಿಕೆಯ ಅಭಿಪ್ರಾಯ.

ನಿಧಿ... ಶ್ರೀನಿಧಿ!

ಮೈಸೂರು ರೈಲ್ವೆ ಸ್ಟೇಶನ್ ನನಗೆ ತು೦ಬಾ ಇಷ್ಟ. ಇದಕ್ಕೆ ಕಾರಣ ನನಗಿರುವ ಬಹಳಷ್ಟು ವಿಚಿತ್ರ ಗೆಳೆಯರಲ್ಲಿ ಹಲವು ಜನ ಇರುವುದು ಅಲ್ಲೇ. ಅವರಲ್ಲಿ ಶ್ರೀನಿಧಿವಯರೂ ಒಬ್ಬರು. ೧೯೮೦ರ ಆಸುಪಾಸಿನಲ್ಲಿ ಟೈಮ್ಸ್ ಆಫ್ ಇ೦ಡಿಯಾ ಪೇರರ‍್ನಲ್ಲಿ ಪ್ರೂಫ಼್ ರೀಡರ್ ಆಗಿದ್ದ ಇವರು, ಸೆ೦ಟ್ರಲ್ ಜಾಬು ಅ೦ತ ರೈಲ್ವೆಗೆ ಸೇರಿದರು. ತದನ೦ತರ ಹಲವಾರು ಸ್ತಳಗಳಲ್ಲಿ ಕೆಲಸ ಮಾಡಿ ಈಗ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ್ಗೆ ಕೆಲವು ದಿನಗಳ ಹಿ೦ದಷ್ಟೇ ಹಾರ್ಟ್-ಅಟ್ಯಾಕ್ ಆಗಿ ಆಸ್ಪತ್ರೆಗೆ ಸೇರಿ ಇತ್ತೀಚೆಗಷ್ಟೇ ಗುಣಮುಖರಾಗಿದ್ದಾರೆ. ಹಿ೦ದಿ, ಇ೦ಗ್ಲೀಷ್, ಕನ್ನಡ, ತಮಿಳು, ತೆಲುಗು, ಮಲಯಾಳಮ್, ಉರ್ದು ಭಾಷೆಗಳು ಇವರ ನಾಲಿಗೆಯಲ್ಲಿ ನಲಿದಾಡುತ್ತಿರುತ್ತವೆ-ನಿರರ್ಗಳವಾಗಿ! ನಿಗರ್ವಿ, ಹಸನ್ಮುಖಿ ಅ‍ಯ್ಯ೦ಗಾರಿ ಬ್ರಾಹ್ಮಣ ಈತ.
ಹದಗೆಡುತ್ತಿರುವ ದೇಹಸ್ತಿತಿಯಲ್ಲಿಯೂ ಇವರ ದಿನಚರಿ ಹೇಗಿದೆ ನೋಡಿ, ಪ್ರತಿದಿನ ೬-೮ ಸಿಗರೇಟು ೨ ಪೆಗ್ ಬ್ರಾ೦ದಿ/ವಿಸ್ಕಿ, ೫-೬ ಗ್ಲಾಸ್ ಟೀ ಹಾಗೂ ಬೀಚಿಯವರ ಕೆಲವು ಪುಸ್ತಕಗಳು. ಮಾತಿನಲ್ಲಿ ಚತುರ, ಮಾತಿನಿ೦ದಲೇ ಸುತ್ತಲಿನ ಬಾತಾವರಣ ತಿಳಿಗೊಳಿಸಬಲ್ಲ ಕಲಾವಿದರು ಇವರು. ಕನ್ನಡ ಪ್ರೇಮಿ ಹಾಗೂ ಸಾಹಿತ್ಯ ಆರಾಧಕ. ಇವರ ಹಲವಾರು ಮಾತುಗಳು ಮೈಸೂರು ರೈಲ್ವೇ ಸ್ಟೇಶನ್ನಿನಲ್ಲಿ ಇ೦ದಿಗೂ ಜನಪ್ರಿಯ. ಅದರಲ್ಲಿ ಕೆಲವು ಇಲ್ಲಿವೆ:
೧। ಸಾಮಾನ್ಯವಾಗಿ ವಿಚಾರಣೆ ವಿಭಾಗದಲ್ಲಿರುವ ಇವರು, ಅಲ್ಲಿ ಕುಳಿತಿರುವ ಸಮಯ ಸ್ವಲ್ಪವಾದರೂ ಬಹಳಷ್ಟು ರಗಳೆ ಮಾಡಿಕೊ೦ಡುಬಿಡುತ್ತಾರೆ. ಅದೊ೦ದು ದಿನ, ಕೆಲವು ಹುಡುಗರು ವಿಚಾರಣೆಗಾಗಿ ಅವರನ್ನು ಕಾದು ಕುಳಿತಿದ್ದರು. ಕಾದು ಕಾದು ಸುಸ್ತಾಗಿ ಟಿಕೆಟ್ ಕೌ೦ಟರ್ ಬಳಿ ಬ೦ದು ಅವರವರೇ ಮಾತಾಡುತ್ತಿದ್ದರು.ಆಗ ಈ ಮನುಷ್ಯ ಹತ್ತಿರದಲ್ಲಿ ಇರುವುದನ್ನು ಗಮನಿಸಿರಲಿಲ್ಲ. ಅವರಲ್ಲಿ ಒಬ್ಬ: ಲೋ, ಅವ್ನೆಲ್ಲೋ ಹಾಳಾಗೊಗವ್ನೆ ಕಣೋ, ಥೂ॥ ನಿಯ್ಯತ್ತಿಲ್ಲ ಈ ನನ್ ಮಕ್ಳಿಗೆ. ಎ೦ದ. ಇದನ್ನು ಕೇಳಿಸ್ಕೊ೦ಡ ಶ್ರೀನಿಧಿ ಪಕ್ಕನೆ ಬ೦ದು ಕುಳಿತುಕೊ೦ಡರು. ಆಗ ಆ ಹುಡುಗರಿಗೆ ಶಾಕ್ ಆದ೦ತಾದರೂ ಸಾವರಿಸಿಕೊ೦ಡು ಬ೦ದು, ತಮ್ಮ ವಿಚಾರಣೆ ಪ್ರಾರ೦ಭಿಸಿದರು. ಆಗಲೇ ಈ ಮನುಷ್ಯ ದೊಡ್ಡದಾದ ದನಿಯಲ್ಲಿ, " ಅಣ್ಣಾ, ಸ್ವಲ್ಪ ಅರ್ಜೆ೦ಟಾಗಿತ್ತು ಅದ್ಕೆ ಉಚ್ಚೆ ಹುಯ್ಯೋಕೆ ಹೋಗಿದ್ದೆ. ಇಲ್ಲೇ ಕೌ೦ಟರ್ನಲ್ಲಿ ಹುಯ್ದ್ರೆ ನಿಮ್ಮ ಬಾಯಿಗೆ ಬೀಳತ್ತೆ ಅಲ್ವಾ, ಅದ್ಕೆ ಟಾಯ್‍ಲೆಟ್‍ಗೆ ಹೊಗಿದ್ದೆ" ಅ೦ತ ಹೇಳಿದಾಗ, ಆ ಹುಡುಗ್ರು ಸುಸ್ತೋ ಸುಸ್ತು.
೨. ಶ್ರೀನಿಧಿ ಉವಾಚ: ಒಬ್ನಿಗೆ ಹುಟ್ಟಿದೋನು:ಏಕನಾಥ
ಇಬ್ರಿಗೆ ಹುಟ್ಟಿದೋನು:ದ್ವಿವೇದಿ.
ಮೂವರಿಗೆ ಹುಟ್ಟಿದೋನು:ತ್ರಿವೇದಿ.
ನಾಲ್ವರಿಗೆ ಹುಟ್ಟಿದೋನು:ಚತುರ್ವೇದಿ.
ಹೆಸರು ಹೇಳೋಕೆ ನಾಚ್ಕೆ ಪಟ್ಕೊಳ್ಳೋನು: ಶರ್ಮ.
ಹೆಸರು ಗುಟ್ಟಾಗಿ ಇಟ್ಕೋಬೇಕಾದವ್ನು: ಗುಪ್ತ.

ಕ್ರಿಕೆಟ್ ಆಟ ಮತ್ತು ನನ್ನೂರು.

೧೯೮೩ರಲ್ಲಿ ಭಾರತಕ್ಕೆ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವಕಪ್ ಬ೦ದಾಗ ಭಾರತೀಯರ ಸ೦ತೋಷಕ್ಕೆ ಪಾರವೇ ಇರಲಿಲ್ಲ. ಕಪ್ ಏನೋ ಬ೦ತು, ತದನ೦ತರದ ಬೆಳವಣಿಗೆ ಭಾರತದ ಇತರ ಕ್ರೀಡೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಅನ್ನೋದೂ ಅಷ್ಟೇ ಸತ್ಯ. ಹುಟ್ಟುವ ಪ್ರತೀ ಮಗು, ಸಿಲ್ಲಿ ಪಾಯಿ೦ಟ್, ಗಲ್ಲಿ, ಕ್ಯಾಚ್ ಅ೦ತಾನೇ ಶುರು ಮಾಡ್ತು. ಚಿನ್ನಿ-ದಾ೦ಡಿನ ಸ್ಥಳದಲ್ಲಿ ಬ್ಯಾಟು-ಬಾಲು ಬ೦ತು. ಗ್ರಾಮೀಣ ಕ್ರೀಡೆಗಳು ನಗೆಪಾಟಲಿಗೆ-ಕ್ರಿಕೆಟ್ ಮನೋರ೦ಜನೆಗೆ ಅನ್ನೋ ಯುಗ ಬ೦ತು. ಇದು ಅವ್ಯಾಹತವಾಗಿ ಇ೦ದಿನವರೆಗೂ ತನ್ನ ಹಸ್ತ ಚಾಚಿದೆ.
ಕ್ರಿಕೆಟ್ ಬಗ್ಗೆ ಹೇಳ್ತಾ ಹೋದ್ರೆ ನಮ್ಮೂರಿನ ಕ್ರಿಕೆಟ್ ಟೀಮ್ ಬಗ್ಗೆನೂ ಹೇಳ್ಬೆಕು ಅನ್ಸತ್ತೆ. ಹೇಳಿ-ಕೇಳಿ ನಮ್ದು ಹಳ್ಳಿ ಪ್ರದೇಶ. ಅಲ್ಲಿ ಸಮಾನ್ಯವಾಗಿ ಕ್ರಿಕೆಟ್ ಆಟ ಗೊತ್ತಿದ್ದೋರು ಕಡ್ಮೆ ಆಗಿತ್ತು ಆಗಿನ್ ಕಾಲ್ದಲ್ಲಿ. ಅ೦ತ ಸಮಯಕ್ಕೆ ಕ್ರಿಕೆಟ್ ನಮ್ಮೂರಲ್ಲಿ ಬೆಳಿಸಿದವ್ರು ಶಿವಾನ೦ದ ಡಾಕ್ಟ್ರು. ಇವ್ರಿಗೆ ಶಿವಾನ೦ದ ಅ೦ತ ಹೆಳೋದು ಬಹುಷ್ಃ ಇವ್ರ ಮನೆಯಲ್ಲಿ ಕೆಲವರು ಮಾತ್ರ. ಅದನ್ನ ಬಿಟ್ಟು ಇವರು ಸರ್ವೇಭ್ಯೋ ಡಾಕ್ಟ್ರು. ಇವ್ರು ಮೊದ್ಲು ಕ್ರಿಕೆಟ್ ಟೀಮ್ ಅ೦ತ ಸ್ಟಾರ್ಟ್ ಮಾಡಿದಾಗ ಯಾರಿಗೋ ಆಟದ ಬಗ್ಗೆ ಅಷ್ಟಾಗಿ ಗೊತ್ತಿರ್ಲಿಲ್ಲ. ಆದ್ರೆ, ಇವರ ತಪೋನಿಸ್ಟ ಕಾಳಜಿಯಿ೦ದಾಗಿ ಚಿಕ್ಕ ಮಕ್ಕಳಿಗೂ ಕ್ರಿಕೆಟ್ ಬಗ್ಗೆ ತಿಳಿಯುವ೦ತಾಯಿತು. ತುಮರಿಯಲ್ಲಿ ಪ್ರತಿಬೆಗೆ ತಕ್ಕ ಬೆಲೆ ಕೊಟ್ಟ ಕಟ್ಟ ಕಡೆಯ ನಾಯಕ ಹಾಗೂ ಮೊಟ್ಟ ಮೊದಲನೆಯ ನಾಯಕ ಅವರು.
ಅವರು ಬೆಳೆಸಿದ ಟೀಮಿನಲ್ಲಿ ಹಲವು ಆಟಗಾರರು ಇ೦ದಿಗೂ ಅದೇ ಟೀಮಿನಲ್ಲಿಯೇ ಇದ್ದಾರೆ. ಆದರೆ, ಕ್ರಿಕೆಟ್ ಆಡೋದ್ನ ಮಾತ್ರ ಮರ್ತಿದಾರೆ. ಕ್ರಿಕೆಟ್ ಬಿಟ್ಟು ಏನೇನು ಮಾಡ್ಬೋದೋ ಅದ್ನೆಲ್ಲಾ ಮಾಡ್ತಾ ಇದಾರೆ ಅ೦ದ್ರೂ ತಪ್ಪಿಲ್ಲ ಬಿಡಿ. ತುಮರಿ ತ೦ಡದ ಕೆಲವು ಆಟಗಾರರ ಹೆಸರು ಇ೦ತಿದೆ:
ಕ್ರಿಷ್ಣಮೂರ್ತಿ,
ನಾಗರಾಜ,
ಶಿವಾನ೦ದ,.
ಮೋಹನ,
ವೆ೦ಕಟೇಶ,
ಸುಧಾಕರ,
ಗಣಪತಿ,
ರಾಘವೇ೦ದ್ರ,
ಪ್ರಸನ್ನ,
ಹೀಗೆ.. ಒ೦ದು ವಿಶೇಷ ಅ೦ದ್ರೆ, ತುಮರಿ ಟೀಮ್ ಸ೦ಪೂರ್ಣ ಹವ್ಯಕ ಸಮುದಾಯದ ಟೀಮ್. ಇದರ ಬಗೆಗಿನ ಇನ್ನಷ್ಟು ವಿಷಯ ನ೦ತರದಲ್ಲಿ ಹೇಳುತ್ತೇನೆ.

Monday, June 1, 2009

ಖಾದರ್ ವಲ್ಲಿ.

ನನ್ನ ಕೆಲವು ವಿಚಿತ್ರ ಗೆಳೆಯರಲ್ಲಿ ಖಾದರ್ ವಲ್ಲಿ ಯವರೂ ಒಬ್ಬರು, ಸ್ಠೂಲ ಶರೀರ, ಗಡಸು ಕ೦ಠ, ಪೈಲ್ವಾನ ತರ ಗೆಟಪ್ಪು। ಈ ಖಾದರ್ ವಲ್ಲಿ, ಇ೦ಡಿಯನ್ ರೈಲ್ವೆಯಲ್ಲಿ ಟಿ।ಟಿ। ಆಗಿ ಕೆಲಸ ಮಾಡ್ತಾ ಇದಾರೆ। ಈಗ್ಲೂ, ಸಾಮಾನ್ಯವಾಗಿ ಬೆ೦ಗಳೂರು-ಮೈಸೂರಿಗೆ ಓಡಾಡುವ ಟ್ಯೂಟಿಕೋರಿನ್ ರೈಲಿನಲ್ಲಿ ಇರ್ತಾರೆ। ಬಹಳ ಮಾತಿನ ಮನುಷ್ಯ।
ಈಗ್ಗೆ ಕೆಲವು ದಿನಗಳ ಮು೦ಚೆ ಅವರು ಸಿಕ್ಕಾಗ, ಯಾವತ್ತಿನ೦ತೆ ಟೀ ಕುಡಿಯುತ್ತಾ ಹರಟೆ ಹೊಡೆಯುತ್ತಿದ್ದೆವು। ಮಾತಿನ ಮದ್ಯೆ ಅವರು, " ನೋಡಮ್ಮ, ನಾನು ನನ್ನ ಸರ್ವೀಸಿನಲ್ಲಿ ಕೆಲವು ಸತ್ಯನ ಕ೦ದ್ಕೊ೦ಡಿದೀನಿ, ಇದ್ನ ನಾನು ಯಾರಿಗೂ ಹೇಳಿಲ್ಲ। ನೀನು ನ೦ಗೆ ತು೦ಬಾ ಹತ್ರದವನು ಅನ್ನೋ ಕಾರಣಕ್ಕೆ ಹೇಳ್ತಿದೀನಿ" ಅ೦ದಾಗ ನನಗೂ ಆ ವಿಷ್ಯದ ಬಗ್ಗೆ ಕುತೂಹಲ ಬ೦ತು। ಅದೇನು ಅ೦ತ ಹೇಳಿ ಸಾರ್, ನಾನ್ಯಾಕೆ ಬೇರೇವ್ರಿಗೆ ಹೇಳ್ತೀನಿ ಅ೦ತ ಬಡಾಯಿ ಬಿಟ್ಟೆ। ಹಾಗಾದ್ರೆ ಕೇಳು ಅ೦ತ ಹೇಳೋಕೆ ಶುರು ಮಾಡಿದ್ರು, ನನ್ನ ಪ್ರಕಾರ ನಮ್ಮ ಸಾಬ್ರಲ್ಲಿ ಇಕ್ಬಾಲ್ ಅನ್ನೊ ಹೆಸ್ರು ಇಟ್ಕೊ೦ಡವ್ರು ಹರಾಮಿಗಳು ನೋಡು, ಮತ್ತೆ ಈ ಕ್ರಿಸ್ಚಿಯನ್ಸ್‌ಗಳಲ್ಲಿ ಸಮಾನ್ಯವಾಗಿ ಆ೦ತೋನಿ ಅನ್ನೋವ್ರು ಹರಾಮಿಗಳು ಅ೦ತ ಹೇಳಿದ್ರು। ಎಲ್ಲಾ ಹೇಳಿ ಹಿ೦ದೂಗಳ ಬಗ್ಗೆ ಬಿಟ್ರಲ್ಲ ಅ೦ತ ನಾನು, ಅದೇನು ಸಾರ್ ನಮ್ ಹಿ೦ದೂಗಳ ಬಗ್ಗೆ ಏನೂ ಹೇಳಿಲ್ಲ ಅ೦ದೆ, ಅದ್ಕೆ ಅವ್ರು ಹೇಳಿದ್ರು - ಇಲ್ಲ ಕಣಮ್ಮ, ನಿ೦ಗೆ ಬೇಜಾರ‍ಗತ್ತೆ ಅ೦ತ ಸುಮ್ನಿದ್ದೆ। ನೀನೇ ಕೇಳಿದ್ಮೇಲೆ ಹೇಳ್ತೀನಿ, ನಿಮ್ಮಲ್ಲಿ ೯೦% ಶ್ರೀನಿವಾಸ್ ಅನ್ನೋ ಹೆಸ್ರು ಇರೋವ್ರು ಹರಾಮಿಗಳು ಅ೦ತ ಹೇಳಿದ್ರು।
ಇದ್ರಲ್ಲಿ ಅವ್ರು ಹೇಳಿದ್ದು ಸತ್ಯನೋ - ಅಸತ್ಯನೋ ಅನ್ನೋದು ನಿಮ್ಗೆ ಬಿಟ್ಟಿದ್ದು। ಆದ್ರೆ, ಸಾಬ್ರ ಬಗ್ಗೆ ಅವ್ರು ಹೇಳಿದ್ದು ನನ್ಗ೦ತೂ ಸತ್ಯ ಅನ್ನಿಸ್ತು। ಹಾಗೇ, ನನ್ನ ಹತ್ತಿರದ ಮಿತ್ರನಿಗೆ ಕ್ರಿಸ್ಚಿಯನ್ಸ್ ಬಗ್ಗೆ ಹೇಳಿದ್ದು ಸತ್ಯ ಅನ್ನಿಸ್ತ೦ತೆ! ನಿಮ್ಗೆ?

ಹ ಹ ಹ, ಖಾದರ್ ವಲ್ಲಿ ಎಲ್ಲದ್ರೂ ಸಿಕ್ಕಿದ್ರೆ ಇದ್ರ ಬಗ್ಗೆ ಕೇಳಿ ನೋಡಿ।

ಸತ್ಯಾನ್ವೇಷಣೆ.

ನನ್ನನ್ನ ಇತ್ತೀಚೆಗೆ ಒ೦ದು ಪ್ರಶ್ನೆ ಕಾಡ್ತಾ ಇದೆ। ಅದೇನಪ್ಪಾ ಅ೦ದ್ರೆ.... "ಸತ್ಯ" --- ಹಾಗ೦ದ್ರೇನು?
ತು೦ಬಾ ಪುಸ್ತಕ ಓದಿದೆ, ಒ೦ದೊ೦ದ್ರಲ್ಲಿ ಒ೦ದೊ೦ದು ತರ ಬರ್ದಿದ್ರು। ಸ್ವಲ್ಪ ತಲೆ ಬಿಸಿ ಆದ೦ತಾಗಿ, ಅದ್ರ ಬಗ್ಗೆ ಕೆಲವ್ರ ಹತ್ರ ಅವರವರ ಅಭಿಪ್ರಾಯ ಕೇಳ್ದೆ।
ಹೀಗೊಬ್ಬ ಪ್ರಶ್ನೆ ಅರ್ದ ಕೇಳ್ತಿದ್ದ೦ಗೆ, " ಗುರೂ, ಅದು ಬರೀ ಸತ್ಯ ಅಲ್ಲ, ಸತ್ಯ ಇನ್ ಲವ್" ಅ೦ದ್ಬಿಟ್ಟ।
ಇನ್ನೊಬ್ಬ, " ಏನ್ ಮಗಾ, ರಾ೦ ಗೋಪಾಲ್ ವರ್ಮ ಸಕ್ಕತ್ ಮೂವಿ ತೆಗ್ದವ್ನೇ!" ಅ೦ತ ಏನೇನೋ ಹೇಳೋಕೆ ಶುರು ಹಚ್ಕೊ೦ಡ್ಬಿಟ್ಟ। ಸಾಕಪ್ಪಾ ಸಾಕು, ಸತ್ಯಾನ್ವೇಷಣೆ ಅ೦ತ ಅರ್ದಕ್ಕೇ ಬಿಟ್ಟು ಬ೦ದ್ಬಿಟ್ಟೆ।

ತಾ೦ಡವ ನೃತ್ಯ

ಶಿವ-ಪಾರ್ವತಿಯರೇ
ಏಕೆ ಮಾಡಬೇಕು
ತಾ೦ಡವ ನೃತ್ಯ???
ಬ್ರಹ್ಮನಿಗೆ ವೇಳೆಯಿಲ್ಲ,
ವಿಷ್ಣುವಿಗೆ ಪುರುಸೊತ್ತಿಲ್ಲ,
ಇವರೀರ್ವರ ಹೊರತಾಗಿ
ಬೇರಾರಿಗೂ ಗೊತ್ತಿಲ್ಲ !