Thursday, February 21, 2008

ಮುದುಕ.

ಸುದೀರ್ಘ ಬದುಕಿನಲ್ಲಿ
ಅದೆಷ್ಟೋ ಆಸೆಗಳು
ಅದೆಷ್ಟೋ ನಿರಾಸೆಗಳು
ಹೇಳಲಾಗದ ಮಾತುಗಳು
ಮಾಡಲಾಗದ ಕೆಲಸಗಳು
ಮಾಡಿದ ಸಾಧನೆಗಳು
ನಡುವೆಯೇ
ತಾರುಣ್ಯದ ಆಗಮನ
ಜೊತೆಗೇ ಹರೆಯದ ಜಿಗಿತ
ನಡುನಡುವೆ
ಬೆಳಕು-ಕತ್ತಲಿನಾಟ
ಕೆಲವೊಮ್ಮೆ ಕತ್ತಲು
ಕೆಲವೊಮ್ಮೆ ಬೆಳಕು
ಕೂಡಲೇ ಆರ೦ಭವಾದ
ಮುಪ್ಪಿನ ತಳಕು
ಮುಖದ ಮೇಲೆಲ್ಲಾ
ಮಾಯದ ಗೆರೆ
ಕಣ್ಣುಗಳಲ್ಲಿ ಕ೦ಡೂ ಕಾಣದ
ಲೋಕದ ನೋಟ
ಜೊತೆಗೇನೋ ನೀರೀಕ್ಷೆ
ಮುಗಿದಿಲ್ಲವೇ? ಬದುಕಿನ ನಾಟಕ?
ಅದೆ೦ಥದೋ ಭಾವನೆಯಿ೦ದ
ಗಮ್ಯದತ್ತ ನೋಡುತ್ತಿದ್ದಾನೆ
ಹಣ್ಣು-ಹಣ್ಣು ಮುದುಕ.