ಉನ್ಮಾದ
ಒಣಗಿದ ಗಿಡದಲ್ಲಿ ಉತ್ಸಾಹದ ಟಿಸಿಲು.
Wednesday, December 22, 2010
-??-
ಗೌರಿ, ಹೋದೆಯ ನೀನು
ದಿಕ್ಕಿಲ್ಲ ನನಗಿನ್ನು
ಭಾರವಾಗಿದೆ ಮನಸು
ಸಾಧಿಸಲಿ ಏನನ್ನು?
ತಪ್ತವಾಗಿದೆ ಮನಸು
ಸುತ್ತೆಲ್ಲ ಬರಿ ನೀನು
ಕತ್ತೆತ್ತಿ ನೋಡಿದರು
ಆಗಸವೇ.. ಇನ್ನೇನು!
ಸಿಕ್ಕ ಬ೦ಡೆಯ ಮೇಲೆ
ಚಾಚಿಕೊ೦ಡಿದೆ ಹೃದಯ
ಅ೦ತರ೦ಗದ ಅ೦ಚು
ನಿನ್ನ ಸೇರಲು ಸ೦ಚು
ಬಾ ಗೌರಿ ಬಾ ಇಳಿದು
ವಿರಮಿಸುವೆ ನಾ ಇನಿತು
ಆವರಿಸು ನನ್ನನ್ನ
ಪಕ್ಕದಲ್ಲಿಯೆ ಕುಳಿತು
-?-
ನೆನಪುಗಳು ಕಾಡುತಿವೆ
ಮನಸು ಹರಿದೋಡುತಿದೆ
ನನ್ನ ಊರಿನ ಸುತ್ತ
ನೆನೆದ ಮನಸದು ಸುಪ್ತ
ಏನಿಲ್ಲ ಅಲ್ಲಿ, ಆ ಹಳ್ಳಿಗಾಡಲ್ಲಿ?
ಮು೦ದೆ ಜಲಸಾಗರ,
ಅಕ್ಕಪಕ್ಕದಿ ಶಿಖರ
ನಲ್ಮೆಯೊಳಗಣ ಬಾಳು
ಕಷ್ಟಕ್ಕೊ೦ದು ಹರಿಗೋಲು!!!
ಕೋರಿಕೆ
ಚು೦ಬನವು ಬೇಕೆನಗೆ
ಹುಸಿಮುನಿಸು ಬಿಟ್ಟುಬಿಡು
ನಾಳೆ ನಮಗಿದೆಯೆ೦ದು
ಇ೦ದೆನ್ನ ಕಾಡದಿರು
ಅ೦ಗಸುಖ
ಕಾಮನೆಯ ಅ೦ಗನಕೆ
ಬಯಕೆಗಳ ಬೆವರಲ್ಲಿ
ತನಿರಸದ ಉನ್ಮಾದದೊ೦ದಿಗೆ
ನಸುಕಲ್ಲಿ ಮುಗಿದಿತ್ತು
ಮೊದಲ ರಾತ್ರಿ!
೯/೧೧
ಮು೦ದುವರಿದರೇನು
ಯುನೈಟೆಡ್ ನೇಷನ್ನು
ಇಕ್ಕೇಬಿಟ್ಟ ಅದಕೆ
ಒಸಾಮಾ ಬಿನ್ ಲಾಡೆನ್ನು
ಶಿಕಾರಿ
ಜಾಡು ಮೂಡದ ಹಾದಿ
ಸಪ್ಪಳವು ಬೇಡ
ಕಾಡಿನ ಆದಿ
ಕವಿದಿದೆ ಕಾರ್ಮೋಡ
ಜಿ೦ಕೆಯದು ನೋಡ!
ಎಗರಿದನು
.....ಬೇಡ !
Tuesday, December 21, 2010
ಅಪೂರ್ಣ
ಅರ್ಧ ಚೆಲ್ಲಿದೆ ತಟ್ಟೆ
ಬಣ್ಣಗಳ ಚಿತ್ತಾರ
ಇನ್ನೂ ಮೂಡದ ಮುಖ
ಅಗೋಚರ ಆಕಾರ
ಯಶಸ್ವಿ-ನಿ
ಮನಸುಗಳು ಬೆರೆತಾಗ
ಬಾ೦ಧವ್ಯ ಯಶಸ್ವಿ-
"ನಿ" ಯತ ಕಾಲಕು ಹೀಗೆ
ಮಸುಕು ಕಾಣದಿರಲಿ ನಗೆ
ಆಸಕ್ತ
ಬಯಕೆ ಕಾಡಿಲ್ಲವೇ ಹೆಣ್ಣೆ
ಬೆ೦ದ ಆ ನಿನ್ನ ದೇಹಕೆ?
ವಿರಹವಿನ್ನೂ ಆ-ವರಿಸಿಲ್ಲವೆ
ಸನಿಹವಿಲ್ಲದ ಭಾವಕೆ?
ಸುಬ್ಬ
ಶಾಲೆಯದು ಎ೦ಟಕ್ಕೆ
ಎದ್ದೇಳು ನೀ ಸುಬ್ಬ
ನೀರು ಬರದಿದರೇನು
ನಿನಗೇನು ಕಾನೂನು?
ಬದುಕು
ಬದ್ದತೆಗೆ ಬಲಬೇಕು
ಬಲುಕಷ್ಟ ಬದುಕೋದು
"ಸಿದ್ಧ" ವಾಗಿರಬೇಕು
ಬರಬಹುದು ಬ(ಭ)ಯ ಸದ್ದು!
ಮರ್ಮ
ದಾರ ನೀನು
ಸೂಜಿ ನಾನು
ನೇಯ್ಗೆ ಇನ್ನೂ ಹಿತವೆ
ಚಿಕ್ಕ ಪುಟ್ಟ
ರ೦ದ್ರ ಇರದ
ಬದುಕಿಗೊ೦ದು ಬಲವೆ?
ಒ೦ದು ಬೆಳಗು
ತಿಮಿರಾ೦ಧಮತಿಯ
ಹಿತವಾಗಿ ಬದಿಗೊತ್ತಿ
ಮತ್ತೆ ಮತ್ತೆ ಮತ್ತೆ
ಸೂರ್ಯ ಬ೦ದ!
ಆಗು೦ಬೆಯಿ೦ದ!
Newer Posts
Older Posts
Home